Tuesday, October 19, 2010

ರಾಜನರ್ತಕಿ ಪೂಜಾ ಗಾಂಧಿ...

ಮಳೆ ಹುಡುಗಿ ಪೂಜಾ ಗಾಂಧಿ ಈಗ ನರ್ತಕಿ. ಕೇವಲ ನರ್ತಕಿಯಲ್ಲ. ರಾಜ ನರ್ತಕಿ. ಎಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಪೂಜಾ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಾರ್ ಏ ಚೇಂಜ್ ಅಂತ ತುಳು ನಾಡಿನತ್ತ ಸರಿದ ಈ ಬೆಡಗಿಗೆ ಇಲ್ಲಿ ಡಬಲ್ ಶೇಡ್ ನ ಪಾತ್ರವೇ ಲಭಿಸಿದೆ. ಹಿಂದೆಂದೂ ಮಾಡದ ಕ್ಲಾಸಿಕಲ್ ಡ್ಯಾನ್ಸ್ ಗೆ ಪೂಜಾ ಹೆಜ್ಜೆ ಹಾಕಿದ್ದಾರೆ...

ಪೂಜಾಗೆ
ಇದು ಮೊದಲ ತುಳು ಚಿತ್ರವೇ ಹೌದು..! ಕನ್ನಡದ ಮತ್ತೊಂದು ಸಿನೆಮಾನೂ ಹೌದು. ಕಾರಣ, "ಬೀರೆ ದೇವು ಪೂಂಜೆ" ಅನ್ನೊ ಈ ಚಾರಿತ್ರಿಕ ಸಿನೆಮಾ ತುಳು ಮತ್ತು ಕನ್ನಡದಲ್ಲಿ ಸಿದ್ದವಾಗ್ತಿದೆ. ಏಕಕಾಲಕ್ಕೇನೆ ತೆರೆಗೂ ಬರಲಿದೆ. ಅದಕ್ಕೂ ಮುಂಚೇನೆ ಪೂಜಾ ತಮ್ಮ ಈ ಹೊಸ ಸಾಹಸದ ಬಗ್ಗೆ ಮಾತನಾಡಿದ್ದಾರೆ. ಅದೆಷ್ಟು ಕಷ್ಟವಾಗಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.

ಆದ್ರೂ
, ತುಳು ನಾಡಿನ ಮಂದಿಗೆ ದಿಲ್ ಖುಷ್ ಮಾಡಲು ಬೇಕಾದ ಆ ತಯಾರಿನೂ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಡೈಲಾಗ್ ಕಲಿತು ಟಿಪಿಕಲ್ ಹಳೆ ತುಳುವಿನ ಸಂಭಾಷೆ ಹೇಳಿದ್ದಾರೆ. ಎಟ್ ದಿ ಸೇಮ್ ಟೈಮ್ ಕನ್ನಡ ಡೈಲಾಗೂ ಹೊಡೆಯಬೇಕಿದ್ದ ಸಂದರ್ಭವೂ ಪೂಜಾಗೆ ಬಂದೊದಗಿತ್ತು. ಅದಕ್ಕೇನೆ ಕನ್ನಡ ಸುಲಭ..ತುಳು ಕಷ್ಟ ಅಂತ ಹೇಳುವ ಅನುಭವವೂ ಈಗ ಆಗಿದೆ.
ಅಭಿನಯದ ಚಿತ್ರಕ್ಕೆ ಪೂಜಾನೇ ಮೇನ್ ಅಲ್ಲ ಬಿಡಿ. ೪೦೦ ವರ್ಷದ ಹಿಂದೆ ಇದ್ದ "ಬೀರೆ ದೇವು ಪೂಂಜೆ" ಅನ್ನೋ ಯೋಧನ ಸುತ್ತವೇ ಚಿತ್ರ ಹೆಣೆಯಲ್ಪಟ್ಟಿದೆ. ಆಗಿದ್ದ ರಾಜನ ಅಚ್ಚುಮೆಚ್ಚಿನ ಈ ಬೀರೆ ತನ್ನ ದರ್ಪದಿಂದಲೇ ಹಾಳಾಗುತ್ತಾನೆ.
ರಾಜನ ಆದೇಶದಂತೇನೆ ನರ್ತಕಿಯ ಕುತಂತ್ರಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಾನೆ.

ಈ ರೀತಿಯ ಕಥೆ ಇದ್ದರೂ ಸಹ ತುಳುನಾಡಲ್ಲಿ "ವೀರ ದೇವು ಪೂಂಜೆ" ಈಗಲೂ ಫೇಮಸ್. ತನ್ನ ೧೨ ನೇ ವಯಸ್ಸಿನಲ್ಲಿಯೇ "ಹುಲಿಕೊಂದು" ಹೆಗಲ ಮೇಲೆ ಹೊತ್ತು ತಂದ ಶೂರತ್ವ ದೇವ ಪೂಂಜನದ್ದು. ದಂತ ಕಥೆಗಳನ್ನೂ ಸೃಷ್ಟಿಸಿದ್ದ ಪರಾಕ್ರಮಿ ಈ ದೇವ ಪೂಂಜೆ. ಅಂತಹ ವ್ಯಕ್ತಿಯ ಕಥೆ ಯಕ್ಷಗಾನ ಪ್ರಸಂಗದಲ್ಲಿ ಅದ್ಯಾವಾಗಲೋ ಬಂದು ಹೋಗಿದೆ. ರಂಗದ ಮೇಲೆ ಅದೆಷ್ಟೋ ಸಲ ಆಡಲಾಗಿದೆಯೋ ಏನೋ. ನಿರ್ದೇಶಕ-ನಿರ್ಮಾಪಕ ಆರ್. ಧನರಾಜ್ ಈಗ "ದೇವ ಪೂಂಜೆ" ಕಥೆಗೆ ಚಿತ್ರ ರೂಪ ಕೊಡ್ತಾಯಿದ್ದಾರೆ. ೮೦ ಲಕ್ಷದಷ್ಟು ಬಜೆಟ್ ಪ್ಲಾನೂ ಮಾಡಿದ್ದಾರೆ.

ಆದ್ರೆ, ಈ ಚಿತ್ರ ನಿರ್ಮಾಣದ ಹಿಂದೆ ಎರಡು ಉದ್ದೇಶಗಳಿವೆ. ಒಂದು ರಾಷ್ಟ್ರೀಯ ಅವಾರ್ಡ್ ಪಡೆಯೋ ಆಸೆ. ಮತ್ತೊಂದು ಕರಾವಳಿ ಕಡೆಗಿನ ಕಲೆ-ಸಂಸ್ಕೃತಿ ಎತ್ತಿ ಹಿಡಿಯೋ ಪ್ರಯತ್ನ. ಅದಕ್ಕೇನೆ ಇದೇ ೨೩ ರಿಂದ ಎರಡನೇ ಹಂತದ ಶೂಟಿಂಗ್ ಶುರುವಾಗಲಿದೆ. ಡಿಸಂಬರ್ ೩೦ ರ ಹೊತ್ತಿಗೆ ಚಿತ್ರವನ್ನ ಅವಾರ್ಡ್ ಗೆ ಕಳಿಸುವ ಯೋಜನೆ ಇದೆ. ಬರುವ ಜನವರಿ ಗೆ ಸಿನೆಮಾ ತೆರೆಗೂ ಬರಲಿದೆ. ಅಲ್ಲಿವರೆಗೂ ಪೂಜಾ ಹೊಸ ಅವತಾರಕ್ಕಾಗಿ ಜಸ್ಟ್ ವೇಟ್.

-ರೇವನ್ ಪಿ.ಜೇವೂರ್

ಕೈಲಾಸಂ ಕಿರು ಸಿನೆಮಾ...

ಟಿ.ಪಿ.ಕೈಲಾಸಂ..ನಿಜಕ್ಕೂ ಆಸಮ್ಮೇ ಬಿಡಿ. ನಮ್ಮ ನಡುವಿನ ಜೀವಂತ ಕ್ಯಾರೆಕ್ಟರ್ ಗಳನ್ನ ರಂಗಕ್ಕೆ ತಂದ ಖ್ಯಾತಿ ಇವರದ್ದು. ಈಗ ಇದೇ ವ್ಯಕ್ತಿ ಜೀವಂತವಾದ್ರೆ, ಹೇಗೆ. ಹೌದು...! ರೇಡಿಯೋ ಜಾಕಿ ಶ್ರೀನಿ ಇಂತಹವೊಂದು ಪ್ರಯೋಗ ಮಾಡಿದ್ದಾರೆ. ಪತ್ರಕರ್ತ ಮತ್ತು ರಂಗಕರ್ಮಿ ಎ.ಎಸ್.ಮೂರ್ತಿಯವರು ಬರೆದ "ಟಿಪಿಕಲ್ ಆರಥಿ" ನಾಟಕ ಆಧಾರಿಸಿ ಎಸ್.ವಿ. ಬಾಬು ನಿರ್ಮಾಣದಲ್ಲಿ ಸ್ವತ: ಶ್ರೀನಿನೇ ಒಂದು ಕಿರು ಚಿತ್ರ ಮಾಡಿದ್ದಾರೆ. ಹಾಗೆ ಸಿದ್ಧವಾದ ಆ ಚಿತ್ರವೇ "ಸಿಂಪ್ಲಿ ಕೈಲೋಸಮ್"...

ಈ ಕಿರು ಚಿತ್ರದ ಪ್ರತಿ ಪ್ರೇಮ್ ಅದ್ಭುತವಾಗಿದೆ. ಶ್ರೀಷ್ ಕುಂದರವಲ್ಲಿ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ನಿಜಕ್ಕೂ ಒಂದು ಕಲಾಕೃತಿಯೇ ಆಗಿದೆ. ಅಷ್ಟು ಚೆಂದಗೆ ಇಡೀ ಚಿತ್ರವನ್ನ ತೆಗೆಯಲಾಗಿದೆ. ದೃಶ್ಯ ಸಂಯೋಜನೆಗೆ ಪ್ಲಾನ್ ಮಾಡಿದ ಲೈಟಿಂಗ್ ಆಗಿರಲಿ. ಕ್ಯಾಮೆರಾ ಯ್ಯಾಂಗಲೇ ಆಗಿರಬಹುದು. ಎಲ್ಲವೂ ಮನಮೋಹಕ. ಕಾರಣ, ಅಷ್ಟು ಶೃದ್ಧೆಯಿಂದಲೇ ಲೋಕಲ್ ಮೋಷನ್ ಫಿಕ್ಚ್ ಟೀಮ್ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ.

ಚಿತ್ರದ ಆರಂಭ ಶ್ರೀನಗರ ಕಿಟ್ಟಿ ನಿರೂಪಣೆಯಲ್ಲಿಯೇ ಸಾಗುತ್ತದೆ. ಟಿ.ಪಿ.ಕೈಲಾಸಂ ಅವರ ೧೭ ನಾಟಕಗಳ ಸಂಕ್ಷಿಪ್ತ ವಿವರಣೆನೂ ಇಲ್ಲಿ ದೊರೆಯುತ್ತದೆ. ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಕನ್ನಡದ ಬಗ್ಗೆನೂ ಇಲ್ಲಿ ಪುಟ್ಟದೊಂದು ಪರಿಚಯವೂ ಸಿಗುತ್ತದೆ...ಇದಾದ ಮೇಲೆ ಇಲ್ಲಿ ಟಿ.ಪಿ.ಕೈಲಾಸಂ ಖುದ್ ಮಾತನಾಡಲು ಶುರು ಮಾಡುತ್ತಾರೆ...

ಟಿ.ಪಿ.ಕೈಲಾಸಂ ಇಲ್ಲ ಅನ್ನೋದು ಗೊತ್ತೆಯಿದೆ. ಆದ್ರೆ, ಇಲ್ಲಿ ಆ ಪಾತ್ರಕ್ಕೆ ರೇಡಿಯೋ ಜಾಕಿ ಮತ್ತು ಅಭಿನಯ ತಂರಂಗದ ವಿದ್ಯಾರ್ಥಿ ಶ್ರೀನಿ ಜೀವ ತುಂಬಿದ್ದಾರೆ. ಟಿ.ಪಿ.ಕೈಲಾಸಂ ಥರದ ಗೆಟಪ್. ಸಿಗರೇಟ್ ಸೇದುವ ಅವರ ಸ್ಟೈಲ್. ಸರಾಬು ಕುಡಿಯೋ ಖದರ್. ಹಂಗಂಗೆ ಇಲ್ಲಿ ಕಣ್ಣುಮುಂದೆ ಕಟ್ಟುತ್ತವೆ...ಆ ಕ್ಷಣವೇ ಕೈ ಇಲ್ಲಿ ಇನ್ನು ಜೀವಂತ ಅನ್ನೋಥರವೇ ಭಾಸವಾಗುತ್ತದೆ...

ಕೈಲಾಸಂ ಅನೇಕ ಪಾತ್ರಗಳನ್ನ ರಂಗಕ್ಕೆ ತಂದಿದ್ದಾರೆ. ಅದೇ ಪಾತ್ರಗಳೇ ಈ ಚಿತ್ರದಲ್ಲಿ ಮಾತನಾಡುತ್ತವೆ. ಕೈಲಾಸಂಗೇನೆ ಹತ್ತು ಹಲವು ಪ್ರಶ್ನೆಗಳನ್ನ ಕೇಳುತ್ತವೆ. ಆದ್ರೆ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೇನೆ ಕೈಲಾಸಂ ಮುಗುಳು ನಗೆಯಲ್ಲಿಯೇ ಅವುಗಳನ್ನೆಲ್ಲ ತೇಲಿಸಿ ಮುಂದಿನ ಕ್ಯಾರೆಕ್ಟರ್ ಗಳ ಬಗ್ಗೆ ತಮ್ಮಲಿಯೇ ಪ್ರಶ್ನಿಸಿಕೊಂಡು ಮುನ್ನಡೆಯುತ್ತಾರೆ...

ಈ ರೀತಿ ಚಿತ್ರದಲ್ಲಿ "ಸೂಳೆ" ನಾಟಕ ಪಾತ್ರ ಬರುತ್ತದೆ. ಟೊಳ್ಳು-ಗಟ್ಟಿ ರಚನೆಯ ಕ್ಯಾರೆಕ್ಟರ್ ಗಳು ಹಾದು ಹೋಗುತ್ತವೆ. ಈ ಎಲ್ಲ ಪ್ರಮುಖ ಪಾತ್ರಕ್ಕೆ ನಟಿ ಛಾಯಾ ಸಿಂಗ್ ಜೀವ ತುಂಬಿದ್ದಾರೆ. ಹಾಗಂತ ಛಾಯ ಇಲ್ಲಿ ಎಲ್ಲೂ ಒಂದೇ ಥರ ಕಾಣಿಸುವುದಿಲ್ಲ. ಒಂದೇ ಥರದ ಅಭಿನಯವೂ ಇಲ್ಲ ಬಿಡಿ. ಅಂತಹ ಕಲಾತ್ಮಕ ನಟನೆಯನ್ನ ಛಾಯಾ ಸಿಂಗ್ "ಸಿಂಪ್ಲಿ ಕೈಲೋಸಂ" ನಲ್ಲಿ ತೋರಿದ್ದಾರೆ. ಸದ್ಯಕ್ಕೆ ಈ ಚಿತ್ರ ಬೆಂಗಳೂರಲ್ಲಿ ಇತ್ತೀಚಿಗೆ ಪೂರ್ವ ಪ್ರದರ್ಶನ ಕಂಡಿದೆ. ಮೆಚ್ಚುಗೆನೂ ಪಡೆದಿದೆ...

- ರೇವನ್ ಪಿ.ಜೇವೂರ್

ಕಪ್ಪು ಸುಂದರಿ....


ಕಪ್ಪು ಸುಂದರಿ. ಮಂಗಳೂರಿನ ಬೆಡಗಿ. ಮುಂಬೈಯಲ್ಲಿ ಬೆಳೆದ ಹುಡುಗಿ.. ಸ್ಲಂ ಡಾಗ್ ಚಿತ್ರದಿಂದ ಹಾಲಿವುಡ್ ನಲ್ಲಿ ಹೆಸರು. ಈಗ ಇದೇ ಫ್ರಿಡಾ ಪಿಂಟೋ ಮತ್ತೊಂದು ಚಿತ್ರಕ್ಕೆ ನಾಯಕಿ. ಮುಸ್ಲಿ ರಾಷ್ಟ್ರದ ಮಹಿಳೆಯರ ಕಥೆ-ವ್ಯಥೆ ಬಿಂಬಿಸುವ ಚಿತ್ರದಲ್ಲಿ ಫ್ರಿಡಾನೇ ಮೇನ್. ಪ್ರೀಡಾನೇ ಎಲ್ಲ. ಕಥೆ ಕೂಡ ಫ್ರೀಡಾ ನಿಭಾಯಿಸಿದ ಪಾತ್ರದ ಸುತ್ತವೇ ಸಾಗುತ್ತದೆ. ಅದೇ ಪಾತ್ರದ ಹೆಸರನ್ನೇ ಚಿತ್ರಕ್ಕೆ ಇಡಲಾಗಿದೆ. ಅಂದ್ರೆ, "ಮಿರಾಲ್" ಅನ್ನೋದ ಪಿಂಟೋ ಕಾಣಿಸಿಕೊಳ್ತಾಯಿರೋ ಮತ್ತೊಂದು ಇಂಗ್ಲೀಷ್ ಚಿತ್ರ..ಪ್ಯಾಲೆಸ್ಟೆನ್ ಭಾಷೆಯಲ್ಲೂ ಇದು ಸಿದ್ಧವಾಗಿದೆ...

ಫ್ರಿಡಾ ಇಲ್ಲಿ ಒಬ್ಬ ಸ್ಕೂಲ್ ಗರ್ಲ್. ಅಪ್ಪನ ಸುಪರ್ದಿಯಲ್ಲಿ ಬೆಳೆದ ಪುಟ್ಟಿ. ಪ್ಯಾಲೆಸ್ಟೆನ್ ನಂತಹ ಸ್ಥಳದಲ್ಲಿ ಬೆಳೆಯವ ಹುಡುಗಿ. ಓದುವಾಗಲೇ ಭಾರೀ ಮಾತುಗಾರ್ತಿ. ತಡವಾಗಿ ಬಂದು ಪ್ರೇಯರ್ ನಲ್ಲಿ ನಿಲ್ಲೋ ಆಕೆ. ೧೭ ವರ್ಷಕ್ಕೇನೆ ಪ್ರೀತಿ-ಪ್ರೇಮ ಅಂತ ಸುತ್ತುವ ಹುಡುಗಿ. ಆದ್ರೂ ಎನೋ ಸಾಧಿಸುವ ಛಲಲ. ಮುನ್ನುಗ್ಗುವ ಧೈರ್ಯ. ಇದೇ ಈ ಹುಡುಗಿಯನ್ನ ಕಷ್ಟಕ್ಕೆ ಸಿಲುಕಿಸುತ್ತದೆ...ಪ್ರೀತಿಸಿದ ಹುಡುಗ ಟೆರರ್ ಆಗಿರೋದ್ರಿಂದ ಪೋಲಿಸ್ರ ಏಟು ಬೀಳುತ್ತವೆ. ಹೀಗೆ ಸಾಗುತ್ತದೆ ಮಿರಾಲ್ ಕಥೆ...

ಆದ್ರೆ, ಇಂತಹ ಕಥೆಗಳು ಪ್ಯಾಲೆಸ್ಟ್ ನಲ್ಲಿ ಸಾಕಷ್ಟಿವೆ. ಇಂತಹವುಗಳನ್ನ ಹತ್ತಿರದಿಂದ ನೋಡಿದ ಪತ್ರಕೆರ್ತೆ ರೂಲಾ ಗೆಬ್ರೆಯಲ್ "ಮಿರಾಲ್" ಅಂತ ಕಾದಂಬರಿಯನ್ನೆ ಬರೆದಿದ್ದಾರೆ. ಇದನ್ನ ಓದಿದ ನಿರ್ದೇಶಕ ಜುಲಿಯನ್ ಸ್ಕಾನ್ ಬೆಲ್ ಫ್ರೀಡಾಳನ್ನ ಹಾಕಿಕೊಂಡು "ಮಿರಾಲ್" ಅಂತಲೆ ಚಿತ್ರ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದ್ರೆ, ಮಿರಾಲ್ ಬರೆದ ಇದೇ ರೂಲಾ ಗೆಬ್ರೆಯಲ್ ಚಿತ್ರಕ್ಕೆ ಸ್ಕ್ರೀನ್ ಪ್ಲೇ ಮಾಡಿದ್ದಾರೆ...

ಚಿತ್ರ ಕೇವಲ ಮಿರಾಲ್ ಕಥೆ ಹೇಳ್ತಿಲ್ಲ. ಪ್ಯಾಲೆಸ್ಟೆನ್ ನ ಪ್ರತಿ ಮಹಿಳೆಯ ಕಥೆಯನ್ನ ಇದು ಹೇಳ ಹೊರಟ್ಟಿದೆ. ಕಳೆದ ಸೆಪ್ಟಂಬರ್ ೩ ರಂದು ಇದು ವೆನಿಸ್ ಫಿಲ್ಮ ಫೆಸ್ಟಿವಲ್ ನಲ್ಲೂ ಪ್ರರ್ದಶನ ಕಂಡಿದೆ. ಫ್ರಾನ್ಸ್ ಫಿಲ್ಮ ಫೆಸ್ಟ್ ನಲ್ಲೂ "ಮಿರಾಲ್" ಗಮನ ಸೆಳೆದಿದ್ದಾಳೆ. ಅಷ್ಟೇ ಪ್ರಶಂಸೆನೂ ಪಡೆದಿದ್ದಾಳೆ..ಅಮೆರಿಕದಲ್ಲೂ ಮಿರಾಲ್ ತೆರೆ ಕಾಣಲಿದೆ. ಆದ್ರೆ, ಅದಕ್ಕೆ ೨೦೧೧ ಮಾರ್ಚ್ ೨೫ ರವರೆಗೂ ಕಾಯಬೇಕು...

-ರೇವನ್ ಪಿ.ಜೇವೂರ್

ಪುನಿತ್ ಪವರ್...

ಪುನಿತ್ ಪವರ್ ಮಲ್ಟಿಪಲ್ ಆಗಿದೆ...
ಹೌದು..! ಮಲ್ಟಿಸ್ಟಾರರ್ ಸಿನೆಮಾದಲ್ಲಿ ಪುನಿತ್ ಮೊದಲ ಭಾರಿ ನಟಿಸುತ್ತಿದ್ದಾರೆ. ಮೊದಲೆಲ್ಲ ಅಪ್ಪು ಒಬ್ಬರೇ ತೆರೆ ಮೇಲೆ ಮಿಂಚಿತ್ತಿದ್ದರು. ಆದ್ರೆ, ಈಗ ಇಬ್ಬರು ತಾರೆಯರು ಸಾಥ್ ನೀಡ್ತಾಯಿದ್ದಾರೆ. ಜಾಕಿ ನಂತರ ಹೋಮ ಬ್ಯಾನರ್ ನಲ್ಲಿ ಸಿದ್ಧವಾಗ್ತಿರೋ ಈ ಚಿತ್ರದಲ್ಲಿ ಪುನಿತ್ ಗೆ ಲೂಸ್ ಮಾದ ಯೋಗಿ ಮತ್ತು ಶ್ರೀನಗರ ಕಿಟ್ಟಿ ಜೋಡಾಗಿದ್ದಾರೆ.....ರಾಧಿಕಾ ಪಂಡಿತ್ ಮೂವರು ನಾಯಕರ ಮಧ್ಯೆ ಒಬ್ಬಳೇ ಒಬ್ಬ ಚೆಲುವೆ...

ಕನ್ನಡದವರ ಈ ಚಿತ್ರಕ್ಕೆ ತಮಿಳು ಚಿತ್ರದ ಸಂಪೂರ್ಣ ಆಧಾರವಿದೆ."ನಾಡೋಡಿಗಳ್" ಅಂತ ಕಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ ಈ ಚಿತ್ರ ಮೂವರು ಗೆಳೆಯರ ಕಥೆ ಹೇಳುತ್ತದೆ. ಗೆಳೆಯನ ಪ್ರೀತಿಗಾಗಿ ಜೊತೆಗೇನೆ ಇರೋ ಸ್ನೇಹಿತರು ಇನ್ನಿಲ್ಲದಂತೆ ಕಷ್ಟ ಪಡೋದು. ತಮ್ಮ ಜೀವನವನ್ನೇ ಮುಡುಪಾಗಿಡೋದು "ನಾಡೋಡಿಗಳ್" ಚಿತ್ರದ ಪ್ರಮುಖ ಅಂಶ..ಆದ್ರೆ, ಹೊಸಬರ ಈ ಸಿನೆಮಾದಲ್ಲಿ ಸಾಕಷ್ಟು ತಿರುವುಗಳಿವೆ. ಹೀಗೆ ಆಗುತ್ತದೆ ಅಂದುಕೊಳ್ಳುವ ಮೊದಲೇ ಚಿತ್ರಕಥೆ ಬೇರೆ ದಿಕ್ಕಿನತ್ತ ಕರೆದುಕೊಂಡು ಹೋಗುತ್ತದೆ. ಅಂತಹ ಪ್ರಯೋಗಾತ್ಮಕ ಚಿತ್ರಕಥೆಗೆ ಒಬ್ಬರಲ್ಲ, ಇಬ್ಬರಲ್ಲ, ರಾಜ್ ಫ್ಯಾಮಿಲಿ ರಾಘ್ರೇಂದ್ರ ರಾಜ್ ಕುಮಾರ್ ಅಂಡ್ ಪುನಿತ್ ರಾಜ್ ಕುಮಾರ್ ಮನಸೋತಿದ್ದಾರೆ. ಅದರ ಫಲವೇ ಈಗ ಕನ್ನಡದಲ್ಲಿ "ನಾಡೋಡಿಗಳ್" ಯಥಾವತ್ತು ಸಿದ್ಧವಾಗುತ್ತಿದೆ..

ಆದ್ರೂ, ತಮಿಳ್ ನೇಟಿವಿಟಿಗೂ. ಇಲ್ಲಿಯ ನೇಟಿವಿಟಿಗೂ ತುಂಬಾನೇ ವ್ಯತ್ಯಾಸ. ಹಾಗಾಗಿ, ದಾಡಿ ಮತ್ತು ಲುಂಗಿಯಲ್ಲಿ ಪುನಿತ್ ನೋಡಲು ಸಾಧ್ಯವೇ. ಅದಕ್ಕೇನೆ ಪುನಿತ್ ಅಂಡ್ ಫ್ರೆಂಡ್ಸ್ ಗೆ ಇಲ್ಲಿ ೮೦-೯೦ ರ ದಶಕದ ಶೈಲಿಯ ಉಡುಗೆ-ತೊಡುಗೆಗಳನ್ನ ಡಿಸೈನ್ ಮಾಡಲಾಗಿದೆ. ಅದೇ ಲುಕ್ ಅಂಡ್ ಫೀಲ್ ನಲ್ಲಿಯೇ ಅಪ್ಪು ಬರಲಿದ್ದಾರೆ. ರಾಧಿಕಾ ಪಂಡಿತ್ ಕೂಡ ಅಷ್ಟೇ. ಆಗಿನ ಲಂಗಾ-ದಾವಣಿ ಗೆಟಪ್ ನಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಅಷ್ಟೇ ಮಾತುಗಾರ್ತಿ ಕೂಡ ಹೌದು..

ಇವರಲ್ಲದೇ ಚಿತ್ರದಲ್ಲಿ ಇನ್ನು ಅನೇಕ ನಟರಿದ್ದಾರೆ. ಬರೊಬ್ಬರಿ ೧೮ ತಿಂಗಳ ಸುದೀರ್ಘ ಗ್ಯಾಪ್ ನ ನಂತರ ಈ ಚಿತ್ರಕ್ಕಾಗಿ ನಟ ವಿಶಾಲ್ ಹೆಗಡೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ರಂಗಾಯಣ ರಘು ಇಲ್ಲೂ ಮುಂದುವರೆಯಲ್ಲಿದ್ದಾರೆ. ಜಾಕಿ ಟೀಮ್ ನ ವಿ.ಹರಿಕೃಷ್ಣ ಸಂಗೀತ ಇನ್ನು ಹೆಸರಿಡದ ಈ ಚಿತ್ರಕ್ಕೂ ಇದೆ. ಸತ್ಯಾ ಹೆಗಡೆ ಇಲ್ಲೂ ಇದ್ದಾರೆ. ವಿಶೇಷವೆಂದ್ರೆ, ಮಠ ಖ್ಯಾತಿಯ ಡೈರೆಕ್ಟರ್ ಗುರುಪ್ರಸಾದ್ ಡೈಲಾಗ್ ಬರೆದುಕೊಟ್ಟಿದ್ದಾರೆ...೯೦ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬರುವ ಮಾರ್ಚ್ ಹೊತ್ತಿಗೆ ಚಿತ್ರ ತೆರೆಗೂ ಬರಲಿದೆ.

ಆದ್ರೆ
, ಈಗಷ್ಟೇ ಸೆಟ್ಟೇರಿರುವ ಈ ಮಲ್ಟಿಸ್ಟಾರ್ ಸಿನೆಮಾದಲ್ಲಿ ನಾಡೋಡಿಗಳ್ ಚಿತ್ರದ ಒಬ್ಬ ನಾಯಕಿಯನ್ನ ಕನ್ನಡಕ್ಕೂ ಕರೆತಂದಿದ್ದಾರೆ. ಅಭಿನಯ ಅನ್ನೋ ಈ ಹುಡುಗಿ ತಮಿಳು ಚಿತ್ರದಲ್ಲಿ ನಾಯಕ ಶಶಿಕುಮಾರ್ ಸಹೋದರಿ ಪಾತ್ರ ನಿರ್ವಹಿಸಿದ್ದರು. ಇಲ್ಲೂ ಅದು ಮುಂದುವರಿಯಲಿದೆ. ಈ ಹುಡುಗಿಯನ್ನ ತೆರೆ ಮೇಲೆ ನೋಡಿದವರಿಗೆ ಈಕೆ ಅದೆಷ್ಟು ಸುಂದರಿ. ಅದೆಷ್ಟು ಮಾತುಗಾರ್ತಿ ಅನಿಸುತ್ತದೆ. ಅದ್ರೆ, ಈ ನಟಿ ರಿಯಲ್ ಲೈಫ್ ನಲ್ಲಿ ಡಮ್ ಅಂಡ್ ಡಫ್. ಇದನ್ನು ಕೇಳಿ ನಿಜಕ್ಕೂ ಬೇಸರವಾಯಿತು. ಆದರೇನಾಯಿತು. ಈ ಅಭಿನಯಳ ಅಭಿನಯಕ್ಕೆ ಸಲಾಮ್ ಹೊಡೆಯಲೇಬೇಕು....

- ರೇವನ್ ಪಿ.ಜೇವೂರ್

Friday, October 15, 2010

ಒಲವ ಬೆಳಕು...

ಬಾಳಿ ಬದುಕ ಬೇಕು ನಿನ್ನ ಒಲವಿನ ಬೆಳಕಿನಲ್ಲಿ.
ನೋವ ಮರೆಯಬೇಕು ನಿನ್ನ ವರ್ಣನೆಯ
ಕವಿತೆ ಸಾಲುಗಳಲ್ಲಿ. ಕಳೆದು ಹೋಗಬೇಕು
ನಿನ್ನ ಪ್ರೇಮದ ಮಡಿಲಲ್ಲಿ.

ಜೀವನದ ಜಾಡು ಹುಡುಕಿ ಹೊರಟಾಗ ನೀ
ಸಿಕ್ಕೆ ಒಲವ ಮರದಂತೆ. ಸಾಕೆಂದರೂ ಸೂಸುವೆ
ಪ್ರೀತಿಯ ನೆರಳ ಈ ಪ್ರೇಮಹೋಕನಿಗೆ.

ನಲ್ಮೆಯ ನಾಜೂಕಿನ ನನ್ನಾಕೆ ನೀ. ನಗಬಾರದೆ
ನನ್ನೊಮ್ಮೆ ನೋಡಿ. ನಾನಾಗುತ್ತಿದ್ದೇ ಆಗ ನಗುವಿ
ನಗಾರಿ.

ನಾ ಹೊರಟ ಆ ಕ್ಷಣ. ನಿನ್ನಲ್ಲಿತ್ತು ಅದೇನೋ ತಲ್ಲಣ.
ಹೇಳಬಾರದಿತ್ತೇ ಮರುಕ್ಷಣ. ನಾ ನಿನ್ನೊಂದಿಗ್ಗೇನೆ
ಸತ್ತು ಹೋಗುತ್ತಿದ್ದೇ ಅದೇ ದಿನ.

ಮರಳಿ ಬಂದಾಗ ನೀ ನಿರಲಿಲ್ಲ. ಇತ್ತಲ್ಲಿ ನೀ ಬಿಟ್ಟು
ಹೋದ ನಿನ್ನೊಲವಿನ ಮರ.....ನಮ್ಮೊಲವಿನ ಮರ....

- ರೇವನ್ ಪಿ.ಜೇವೂರ್

Wednesday, October 13, 2010

ಸುಂದರ ತಾಣ..ಪ್ರಜ್ವಲ್ ಗಾನ...

ಮುರಳಿ ಮೀಟ್ಸ್ ಮೀರಾ...
ಪ್ರಜ್ವಲ್ ದೇವರಾಜ್ ಹೊಸ ಸಿನೆಮಾ. ಕಳೆದ ಒಂದು ಒಂದೂವರೆ ತಿಂಗಳ ಹಿಂದೆ ಮಹೂರ್ತ ಮುಗಿದಿತ್ತು. ಈಗ ನೋಡಿದ್ರೆ, ಚಿತ್ರವೇ ಸಿದ್ಧವಾಗಿದೆ. ಒಂದೇ ಸ್ಕೆಡ್ಯೂಲ್ ನಲ್ಲಿ ಚಿತ್ರ ಪೂರ್ಣಗೊಳಿಸುವ ಪ್ಲಾನ್ ಚಿತ್ರ ತಂಡದ್ದಾಗಿತ್ತು. ಆದ್ರೆ, ಮಳೆಯೋ...ಎಲ್ಲವನ್ನೂ ಏರು-ಪೇರು ಮಾಡಿತು. ಅಂದುಕೊಂಡದ್ದಕ್ಕಿಂತ ಕೆಲವು ದಿನ ಹೆಚ್ಚೇ ಆಗಿದೆ. ಆದರೂ ನೋ ಪ್ರಾಬ್ಲಂ ಅಂತಲೇ ನಿರ್ದೇಶಕ ಯೋಗೇಶ್ ಹುಣಸೂರು ಮೊದಲ ನಿರ್ಮಾಣದ ತಮ್ಮ ಚಿತ್ರಕ್ಕೆ ಅದೇ ಉತ್ಸಾಹದಲ್ಲಿಯೇ ಸಾಗುತ್ತಿದ್ದಾರೆ.ಚಿತ್ರದ ಹಾಡುಗಳಿಗಾಗಿ ಅದ್ಭುತವೆನಿಸುವ ತಾಣವನ್ನೇ ಹೆಕ್ಕಿ ತೆಗೆದಿದೆ ಇವರ ತಂಡ....

ಹೌದು...! ಈಗ ಇಲ್ಲಿ ಹೆಚ್ಚು ಮಾತನಾಡಲು ಹೊರಟಿರೋದು ಇದನ್ನ. ಬೆಂಗಳೂರಿನ ಹೆಸರಗಟ್ಟದಲ್ಲಿ ಒಂದು ಪ್ಲೇಸ್ ಇದೆ. ಇಲ್ಲಿ ಆದರ್ಶ ಫಿಲ್ಮ ಇನ್ಸ್ ಟಿಟ್ಯೂಟ್ ಸಹ ಇದೆ. ಹಾ!!! ಇದರ ಪಕ್ಕದಲ್ಲಿಯ ಆ ಬಯಲು ಪ್ರದೇಶ ನಿಜಕ್ಕೂ ಸುಂದರ ತಾಣ. ಕೆಮ್ಮಣಗುಂಡಿ..ಇಲ್ಲವೋ ಸಕಲೇಶಪುರದ ಆ ಹಚ್ಚಹಸಿರ ಅನುಭವ ಇಲ್ಲಿಗೆ ಬಂದವರಿಗೆ ಕಂಡಿತ ಆಗುತ್ತದೆ. ಅಂತಹ ಆ ಚೆಂದನೆಯ ಜಾಗದಲ್ಲಿ ಹೆಚ್ಚು ಫೈಟ್ ಸೀನ್ ಗಳೆ ಶೂಟ್ ಆಗುತ್ತವೆ.
ಆದ್ರೆ, ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಗೆ ಅದ್ಯಾವಾಗ ಹೊಳೆಯಿತೋ ಏನೋ. ಹೆಸರಗಟ್ಟದ ಆ ಸ್ಥಳಕ್ಕೆ ಬಂದು ಪಕ್ಕಾ ಪ್ಲ್ಯಾನೇ ಹಾಕಿಕೊಂಡಿದ್ದಾರೆ. ರಾಜಸ್ಥಾನಿ ಬ್ಯಾಕ್ ಡ್ರಾಪ್ ನಲ್ಲಿ ತಮ್ಮ ಚಿತ್ರದ ಹಾಡೊಂದನ್ನ ಚಿತ್ರೀಕರಣಿಸಲು ಶುರು ಮಾಡಿದ್ದಾರೆ.

ಗುಜ್ಜರು
ತೊಡುವ ಉಡುಗೆಯನ್ನ ಧರಿಸಿದ ಮಕ್ಕಳು. ಅಲ್ಲಿಯ ಸಂಸ್ಕೃತಿಯನ್ನ ಬಿಂಬಿಸುವ ಮಹಿಳೆಯರು ಮತ್ತು ಪುರುಷರು ಹೆಸರುಗಟ್ಟದ ಆ ಮನಮೋಹಕ ಜಾಗದಲ್ಲಿ ಕಂಗೊಳಿಸುತ್ತಿದ್ದರು. ಕನ್ನಡ ಚಿತ್ರಕ್ಕೊಂದು ಸಿಂಪಲ್ ಬ್ಯಾಕ್ ಡ್ರಾಪ್ ಥರ ಕಾಣಿಸುತ್ತಿದ್ದರು...

ಇವರ
ಮಧ್ಯೆ ಪ್ರಜ್ವಲ್ ದೇವರಾಜ್ ಮತ್ತು ಹರ್ಷಿಕಾ ಪೊನ್ನಚ್ಚ ಕುಣಿಯುತ್ತಿದ್ದರು. ಧರಿಸಿದ ವೈಟ್ ಅಂಡ್ ವೈಟ್ ಡ್ರೆಸ್ ಇಲ್ಲಿ ಮಿರ..ಮಿರನೇ ಮಿಂಚುವಂತೆ ಮಾಡಿತ್ತು. ನ್ಯಾಚುರಲ್ ಲೈಟ್ಸ್ ಜೊತೆ..ಜೊತೆಗೇನೆ ಸೆಟ್ ಹುಡುಗರು ಸಟ್ ಮಾಡುವ ಲೈಟ್ಸ್ ಈ ಜೋಡಿಯ ಮಿಂಚಿನ ಮೋಡಿಯನ್ನ ಇನ್ನಷ್ಟು ಹೆಚ್ಚಿಸುತ್ತಿದ್ದವು. ದನ್ ಕುಮಾರ್ ಮಾಸ್ಟರ್ ಹೇಳಿಕೊಟ್ಟ ಹೆಜ್ಜೆಗೆ ಹೆಜ್ಜೆ ಹಾಕುವಾಗ ಈ ನವ ಜೋಡಿ ಕಣ್ಮಣ ಸೆಳೆಯುತ್ತಿತ್ತು. ಕಾರಣ, ಅಷ್ಟು ಚೆನ್ನಾಗಿದೆ ತೆರೆ ಮೇಲಿನ ಆ ಫೇರ್...

ಸಂಗೀತ
ನಿರ್ದೇಶಕ ಅಭಿಮಾನ್ ರಾಯ್ ಈ ಒಂದು ಹಾಡು ಬರೆದುಕೊಟ್ಟಿದ್ದಾರೆ. ಇದು ಇಲ್ಲಿಯ ಹಸಿರಿನ ನಡುವೆ ಭಿನ್ನ ವಿಭಿನ್ನವಾಗಿ ಚಿತ್ರೀಕರಿಸಲ್ಪಡಲಿದೆ. ಈ ಒಂದು ಹಾಡಿನ ನಂತರ ತಂಡ ಮತ್ತೊಂದು ಗೀತೆಯ ಶೂಟಿಂಗ್ ಮಾಡಲಿದೆ. ಇದಾದ ಮೇಲೆ ಬರುವ ನವೆಂಬರ್ ಹೊತ್ತಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ನೋಡಿ ಎಂಜಾಯ್ ಮಾಡಿ...

-ರೇವನ್ ಪಿ.ಜೇವೂರ್

Monday, October 11, 2010

ಭಾರತಿ ಹೆಜ್ಜೆ...

ನಟಿ ಭಾರತಿ...
ತಮ್ಮ ಚಿತ್ರ ಬದುಕನ್ನ ಮತ್ತೆ ನೆನೆಪಿಸಿಕೊಂಡಿದ್ದಾರೆ. ನಡೆದು ಬಂದ "ಬೆಳ್ಳಿ ಹೆಜ್ಜೆ"ಯನ್ನ ಮನಸಾರೆ ತಿರುವಿ ಹಾಕಿದ್ದಾರೆ. ಏನು ಹೇಳಲು ಸಾಧ್ಯವೋ ಅದನ್ನೆಲ್ಲ ಕನಾರ್ಟಕ ಚಲನ ಚಿತ್ರ ಅಕಾಡೆಮಿ ತಿಂಗಳ ಪ್ರತಿ ಎರಡನೇ ಶನಿವಾರ ಆಯೋಜಿಸುವ "ಬೆಳ್ಳಿ ಹೆಜ್ಜೆ" ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾರೆ. ಹೆಚ್ಚು ಕಡಿಮೆ ೩ ಗಂಟೆ ನಡೆಯುವ ಬೆಳ್ಳಿ ಹೆಜ್ಜೆಯಲ್ಲಿ ಸಾಕಷ್ಟು ವಿಷಯಗಳನ್ನ ನೆನಪಿಸಿಕೊಂಡಿದ್ದಾರೆ. ಅವುಗಳಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ ಓದಿ ಎಂಜಾಯ್ ಮಾಡಿ....
ಭಾರತಿಯವರು ಕನ್ನಡದವರೇ. ಹಾಗಂತ ಇದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಓದುತಿದ್ದಾಗಿನ ದಿನಗಳವು. ಕಾಲೇಜಿನ ಕಾರ್ಯಕ್ರಮದಲ್ಲಿ ಗೆಳೆತಿಯೊಂದಿಗೆ ಕಾಣಿಸಿಕೊಂಡ ಸಂತದ ಕ್ಷಣಗಳು. ಅದೇ ಖುಷಿಯಲ್ಲಿಯೇ ಕಾಲೇಜಿನವರು ನೋಟೀಸ್ ಬೋರ್ಡ್ ನಲ್ಲಿ ಭಾರತಿ ಮತ್ತು ಅವರ ಗೆಳತಿ ಫೋಟೊ ಅಂಟಿಸಿದ್ದರು. ಅದೃಷ್ಟವೋ ಏನೋ. ಇದನ್ನ ನೋಡಿದ ನಟ ಕಲ್ಯಾಣಕುಮಾರ್ ಮತ್ತು ಚಿನ್ನಿ ಸಂಪತ್ತ ಭಾರತಿಯವರನ್ನ ಆಡಿಷನ್ ಗೆ ಕರೆದಿದ್ದರು. ಇದಾದ ಮೇಲೆ ಎಲ್ಲವೂ ನಾರ್ಮಲ್ ಡೇಸ್.

ಆದ್ರೆ, ಒಂದು ದಿನ ಅವರ ತಂದೆ ಕಾಲೇಜಿಗೆ ಬಂದಿದ್ದರು. ಬಂದೊಡನೆಯೇ ಅಮ್ಮ ನಾವೀಗ ಮದ್ರಾಸಿಗೆ ಹೋಗಬೇಕು. ನಡೆ ಬೇಗ ಅಂದ್ರು. ಆದ್ರೆ, ಭಾರತಿಯವರಿಗೆ ಒಂದೂ ಗೊತ್ತಾಗ್ತಿಲ್ಲ. ನಾನೇಕೆ ಮದ್ರಾಸ್ ಗೆ ಹೋಗಬೇಕು. ಓದು ಬಿಟ್ಟು ನಾನೇಕೆ ಹೋಗಬೇಕು. ಇಂತಹ ಪ್ರಶ್ನೆಯನ್ನ ತಂದೆಗೆ ಕೇಳಿದ್ದೇ ಕೇಳಿದ್ದು. ಅಷ್ಟೇ,ಅಲ್ಲ. ಒಲ್ಲೆ ಎಂದು ಅತ್ತಿದ್ದೇ ಅತ್ತಿದ್ದು. ಆದ್ರೂ, ಅಪ್ಪ ಕೇಳಲಿಲ್ಲ. ಕಾಲೇಜಿನ ಗುರುಗಳು ನಾಯಕಿಯಾಗುವ ಅವಕಾಶ ಅಂತ ಹೇಳೋದನ್ನ ಬಿಡಲಿಲ್ಲ. ಕೊನೆಗೆ ಭಾರತಿಯೆಂಬ ಆ ಕಾಲೇಜು ಯುವತಿ ಮದ್ರಾಸ್ ಗೆ ಬಂದೇ ಬಿಟ್ಟರು.

ದುರಾಷ್ಟವೋ ಏನೋ. ಮೊದಲ ಆಫರ್ ನ ಚಿತ್ರ ಪೂರ್ಣಗೊಳ್ಳಲೇ ಇಲ್ಲ. ಆದ್ರೂ, ಕರೆತಂದ ಚಿನ್ನಿ ಸಂಪತ್ತ ಅವರು ಮದ್ರಾಸ್ ನಲ್ಲಿ ಬಿ.ಆರ್ ಪಂತಲು ಅವರನ್ನ ಪರಿಚಿಯಿಸಿದರು. ಅದರ ಫಲ "ದುಡ್ಡೇ ದೊಡ್ಡಪ್ಪ" ಚಿತ್ರದಲ್ಲಿ ಭಾರತಿ ನಟಿಸಿದರು. ಅಲ್ಲಿಂದ ಅನೇಕ ಚಿತ್ರಗಳಲ್ಲಿ ಭಾರತಿಯವರ ಅಭಿನಯ ಪಂತಲು ಅವರ ಹಲವು ಪಿಕ್ಚರ್ ಗಳಲ್ಲಿ ಕಂಡು ಬಂತು. ಬಂಗಾರದ ಮನುಷ್ಯ, ಮೇಯರ್ ಮುತ್ತಣ್ಣದಂತಹ ಚಿತ್ರದಲ್ಲಿ ರಾಜ್ ಗೆ ಜೋಡಿಯಾಗಿದ್ದರು. ಬಂಗಾರದ ಜಿಂಕೆ ಚಿತ್ರದಲ್ಲಿ ಪತಿ ವಿಷ್ಣುವರ್ಧನ್ ಅವರೊಟ್ಟಿಗೆ ನಟಿಸಿದ್ದರು..ಕೃಷ್ಣದೇವರಾಯ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿಯೂ ಬಂತು. ಹೆಸರು ಎಲ್ಲಡೆ ರಾರಾಜಿಸಿತು.

ಕಾಲೇಜು ದಿನಗಳಲ್ಲಿ ಭಾರತಿಯವರಿಗೆ ಕ್ರೀಡೆ ಅಂದ್ರೆ ತುಂಬಾ ಇಷ್ಟ. ಶಾಲಾ ದಿನಗಳಲ್ಲಿ ಕಂಡಿತ ಒಂದಿಲ್ಲ ಒಂದು ಕ್ರೀಡೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಾಲೇಜು ಮೆಟ್ಟಿಲೇರಿದ ನಂತರವೂ ಇದು ಮುಂದುವರೆದಿತ್ತು. ಶಾಲಾ ದಿನಗಳಲ್ಲಿಯ ಆ ಸಮವಸ್ತ್ರವನ್ನ ಧರಿಸಿಕೊಂಡೇ ಕಾಲೇಜಿಗೆ ಬಂದು ಆಟವಾಡಿದ್ದು ಇದೆ. ಅಷ್ಟೊಂದು ಕ್ರೀಡಾಸಕ್ತಿ ಭಾರತಿಯವರ ಮನದಲ್ಲಿ ಮನೆ ಮಾಡಿತ್ತು. ಸಂಗೀತದೆಡೆಗೂ ಒಂಚೂರು ಒಲವಿತ್ತು. ಆದ್ರೆ, ನಟಿಯಾದ ಮೇಲೆ ಬಹುತೇಕ ಎಲ್ಲವೂ ಮರೆತು ಹೋಯಿತು. ನಟನೆಯ ಕಲಿಕೆಯಲ್ಲಿಯೇ ಪಯಣ ಸಾಗಿತ್ತು. ಕನ್ನಡ ಸೇರಿದಂತೆ ತಮಿಳು.ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ಭಾರತಿ ನಟಿಸಿದರು. ಹಿಂದಿಯಲ್ಲೂ ಬೆಂಗಳೂರಿನ ಭಾರತಿ ಅಭಿನಯ ಕಣ್ಮನ ಸೆಳೆದಿತ್ತು.

ದಿಲೀಪ್ ಕುಮಾರ್ ಅವರೊಟ್ಟಿಗೆ ಸಹ ಭಾರತಿ ಕಾಣಿಸಿಕೊಂಡ್ರು. ಒಂದಲ್ಲ, ಎರಡಲ್ಲ ಎಷ್ಟೇ ಟೇಕ್ ತೆಗೆದುಕೊಂಡರೂ ಸಹನೆಯಿಂದ ಭಾರತಿ ನಟಿಸಿ ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಅವರಿಂದ ಬೇಷ್ ಅನಿಸಿಕೊಂಡ್ರು. ತಮ್ಮ ಶಿಸ್ತಿನಿಂದ ಎಲ್ಲಡೆ ಹೆಸರು ವಾಸಿಯಾದ ಭಾರತಿ ಈಗಲೂ ಹಾಗೇನೆ. ಹೇಳಿದ ಟೈಮ್ ಗೆ ಸರಿಯಾಗಿ ಸೆಟ್ ನಲ್ಲಿ ಹಾಜರಿರುತ್ತಿದ್ದರು. ತಮ್ಮ ಟೈಮ್ ಸೆನ್ಸ್ ನಿಂದಲೇ ಭಾರತಿಯವರು ಹಿಸ್ಟೋರಿಕಲ್ ಚಿತ್ರದ ಅವಕಾಶ ಪಡೆದಿದ್ದರು. ಅದ್ಯಾವುದೋ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪಂತಲು ಅವರು ಭಾರತಿಯವರ ಶಿಸ್ತು ನೋಡಿ ಬೆರಗಾಗಿದ್ದರು. ಐತಿಹಾಸಿಕ ಚಿತ್ರದ ಅವಕಾಶ ನೀಡುವುದಾಗಿಯೂ ಹೇಳಿದ್ರು.

ಈ ರೀತಿ ಪ್ರಶಂಸೆಗೆ ಪಾತ್ರವಾದ ನಟಿ ಇತ್ತೀಚಿನ "ರಾಜ್ ದಿ ಶೋ ಮ್ಯಾನ್" ಚಿತ್ರದ ಹಾಡೊಂದರಲ್ಲಿ ಪುನಿತ್ ಜೊತೆಗೆ ಡಾನ್ಸ್ ಮಾಡಿದ್ದರು. ಕವಿತಾ ಲಂಕೇಶ್ ಅವರ "ಪ್ರೀತಿ ಪ್ರೇಮ ಪ್ರಣಯ" ಚಿತ್ರದಲ್ಲಿ ಅನಂತ್ ನಾಗ್ ಪೇರ್ ಆಗಿ ಭಾರತಿ ಕಾಣಿಸಿಕೊಂಡ್ರು. ತಮ್ಮ ನೆನಪಿನ ಬುತ್ತಿಯನ್ನ "ಬೆಳ್ಳಿ ಹೆಜ್ಜೆ" ಯಲ್ಲಿ ಬಿಚ್ಚಿ ಹಲವರಿಗೆ ಬ್ಲ್ಯಾಕ್ ಅಂಡ್ ವೈಟ್ ದಿನದ ಕಲರ್ ಫುಲ್ ಕಥೆಯ ರಸದೌತಣ ನೀಡಿದರು.

- ರೇವನ್ ಪಿ.ಜೇವೂರ್

Tuesday, October 5, 2010

ಲಂಕೇಶರ ಮಗನ ಪ್ರಚಾರ...


ಲಂಕೇಶರ ಮಗ ಇಂದ್ರಜಿತ್ ಡ್ಯಾನ್ಸ್ ಮಾಡ್ತಾಯಿದ್ದಾರೆ. ನಿರ್ದೇಶಕನಕ್ಕೆ ಕೈ ಹಾಕಿದ್ದು ಗೊತ್ತೇಯಿದೆ. "ಮೋನಾಲಿಸಾ" ದಂತಹ ಚಿತ್ರಕೊಟ್ಟು ಕನ್ನಡದಲ್ಲಿ ಒಂಚೂರು ಜಾಗ ಮಾಡಿಕೊಂಡದ್ದು ಈಗ ಹಳೆ ಕಥೆ. ಹೊಸ ಕಥೆ ಹೊಸದೇ ಬಿಡಿ. "ಹುಡುಗ-ಹುಡುಗಿ" ಚಿತ್ರಕ್ಕೆ ಇದೇ ಇಂದ್ರಜಿತ್ ನಿರ್ದೇಶನವೇನೋ ಮಾಡಿದ್ದಾರೆ. ಆದ್ರೆ ಅದೇನೋ ಏನೊ. ಹೊಸ ಟ್ರೆಂಡ್ ಹೆಸರಲ್ಲಿ ವಿದೇಶಿ ಹುಡುಗಿಯರೊಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಬಾಲ್ಡ್ ಈಜ್ ಬ್ಯೂಟಿಫುಲ್ ಅನ್ನೋ ಹಾಗೆ ಕ್ಲೀನ್ ಸೇವ್ಡ್ ಹೆಡ್ ನಲ್ಲಿ
ಮಿರ..ಮಿರ ಮಿಂಚಿದ್ದೇ ಮಿಂಚಿದ್ದು....
ವಿದೇಶದಿಂದ ಡಾನ್ಸ್ ಸ್ಕೂಲ್ ಹುಡುಗಿಯರನ್ನ ಈ ಹಾಡಿಗಾಗಿ ಕರೆಸಿದ್ದಾರೆ. ಮುಂಬೈನ ಮಾಡೆಲ್ ಗಳ ಸಾಥ್ ಸಹ ಇದೆ. ಬೆಂಗಳೂರಿನ ಇಬ್ಬರು ಹುಡುಗಿಯರ ಜೋಡಿ ಇಲ್ಲಿ ಕೆಂಪಾದವೋ ಎಲ್ಲಾ ಕೆಂಪಾದವೋ ಥರವೇ ಇದೆ. ಈ ಒಂದು ಗೀತೆಗಾಗಿ ಸಿದ್ಧವಾದ ಸೆಟ್ ನಿಜಕ್ಕೂ ಚೆಂದ. ಬಾಲಿವುಡ್ ನ "ವೆಲ್ ಕಮ್" ಚಿತ್ರದ ಹಾಡೊಂದರ ಸೆಟ್ ನೆನಪಿಗೆ ಬರುತ್ತದೆ. ಆದ್ರೆ, ಇದು
ಕನ್ನಡದ ಮಟ್ಟಿಗೆ ಹೊಸತು ಅಂತಲೇಹೇಳಬಹುದು.
ಪ್ರಚಾರಕ್ಕಾಗಿ ರೆಡಿಯಾದ "ವಾಟ್ಸ್ ಅಪ್" ಪಲ್ಲವಿಯ ಈ ಹಾಡು ಸ್ಯಾಂಡಲ್ ವುಡ್ ಲೆಕ್ಕಕ್ಕೆ ವಿನೂತನ. ಹಿಂದೆ ಯಾವುದೇ ನಿರ್ದೇಶಕ ಚಿತ್ರದ ಪಚಾರಕ್ಕಾಗಿ ನೃತ್ಯ ಮಾಡಿದ್ದಿಲ್ಲ. ಸಖತ್ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡದ್ದೂ ಇಲ್ಲ. ಇಂದ್ರಜಿತ್ ಇಂತಹ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಸಂತೋಷ್ ಪಾತಾಜೆ ಈ ಒಂದೇ ಒಂದು ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಮುರಳಿ

ಕೋರಿಯೋಗ್ರಾಫಿ
ಇದಕ್ಕಿದೆ....
ಹುಡುಗ-ಹುಡುಗಿ ಪ್ರಚಾರಕ್ಕೆ ಇಂದ್ರಜಿತ್ ಇನ್ನೊಂದು ತಂತ್ರ ಬಳಸುತ್ತಿದ್ದಾರೆ. ಚಿತ್ರದಲ್ಲಿ ಧರಿಸಿದ ನಟ-ನಟಿಯರ

ಆ ಎಲ್ಲ ಕಾಸ್ಟ್ಯೂಮ್ ಗಳನ್ನ ಧರಿಸಿ ಅದೇ ತಾರೆಯರೂ ರಾಂಪ್ ವಾಕ್ ಕೂಡ ಮಾಡಲಿದ್ದಾರೆ. ಚಿತ್ರದ ಗೀತೆಗಳಿಗೂ ಇವರ ಕುಣಿತವಿದೆ. ಆದ್ರೆ, ಇವರ ಕುಣಿತದಿಂದ ಇಂಡಸ್ಟ್ರೀಲಿ ಸುದ್ದಿಯಂತು ಆಗುತ್ತದೆ. ಆದರೂ, ಚಿತ್ರ ಪ್ರೇಮಿಗಳು ಪ್ರಚಾರದ ಗಿಮಿಕ್ ಗಳಿಗೆ ಮನಸೋಲುವುದಿಲ್ಲ ಅಂತ ಗೊತ್ತೇಯಿದೆ. ಅದಾಗ್ಯೂ ನಿರ್ಮಾಪಕ ಸಂದೇಶ ನಾಗರಾಜ್ ಅಂಡ್ ಮಿಸ್ಟರ್ ಇಂದ್ರಜತ್ "ಹುಡುಗ-ಹುಡುಗಿ" ರೀಚ್ ಮಾಡಲು ಹೊಸ..ಹೊಸ ಸರ್ಕಸ್ ಮಾಡ್ತಾಯಿದ್ದಾರೆ....
- ರೇವನ್ ಪಿ. ಜೇವೂರ್

Friday, October 1, 2010

ರೋಬೊ ರಜಿನಿ...

"ಎಂಧಿರನ್" ಇಂಟ್ರಸ್ಟಿಂಗ್ ಆಗಿದೆ. ಮೊದಲಾರ್ಧ ಹಿಡಿದು ಕುಳ್ಳಿರಿಸುತ್ತದೆ. ದ್ವಿತಿಯಾರ್ಧ ಹೊಸ ಜಗತ್ತಿನ ಅವಿಷ್ಕಾರಗಳ ಅನಾವರಣ ಮಾಡುತ್ತದೆ. ಅಂತ್ಯ ಹಾಲಿವುಡ್ ನ ಪ್ರಮುಖ ಚಿತ್ರಗಳ ದರುಶನ ಮಾಡಿಸುತ್ತದೆ. ಅಷ್ಟರ ಮಟ್ಟಿಗೆ "ಎಂಧಿರನ್" ಹಾಲಿವುಡ್ ರೇಂಜ್ ಗೇನೆ ಸಿದ್ಧವಾಗಿದೆ. ಸುರುವಿದ 150 ಕೋಟಿ ರುಪಾಯಿಯ ಆ ಶ್ರಮ ಎದ್ದು ಕಾಣುತ್ತದೆ. ರೆಹಮಾನ್ ಹಾಡುಗಳು ಅಷ್ಟೊಂದು ಚೆನ್ನಾಗಿ ಕೇಳುವುದಿಲ್ಲ. ಆದ್ರೆ, ನಿರ್ದೇಶಕ ಶಂಕರ್ ಚಿತ್ರ ಪ್ರೀತಿ ಹಾಡಿನ ಚಿತ್ರೀಕರಣದಲ್ಲೂ ಕಂಡು ಬರುತ್ತದೆ...


ರಜಿನಿ ಇಲ್ಲಿ ನಟಿಸಿಯೇಯಿಲ್ಲ. ಬದಲಿಗೆ ರಜಿನಿನೇ ರೋಬೊನೆ ಪರಕಾಯ ಪ್ರವೇಶ ಮಾಡಿದ್ದಾರೆ. ಆದ್ರೆ, ಇಲ್ಲಿ ಎಂದಿನ ರಜಿನಿಯ ದರುಶನ ಆಗೋದಿಲ್ಲ. ಕಾರಣ ಇದು ರೋಬೊಟ್ ಮ್ಯೂವಿ ಕಣ್ರೀ. ಸೈನ್ಸ್ ಸ್ಪರ್ಶವಿರೋ ಪಕ್ಕಾ ತಮಿಳ್ ಸಿನೆಮಾ. ಆದ್ರೂ, ಇಂಗ್ಲೀಷ ಚಿತ್ರ ನೋಡಿದಂತಹ ಅನುಭವ. ಏಕೆಂದ್ರೆ ಇಲ್ಲಿಯ ಪ್ರತಿ ಕೆಲಸವನ್ನ ಹಾಲಿವುಡ್ ಮಟ್ಟಕ್ಕೇನೆ ಮಾಡಲಾಗಿದೆ.



ಸ್ಟೈಲ್ ಕಿಂಗ್ ರಜಿನಿ ಸ್ಟೈಲ್ ಇಲ್ಲಿ ಕಡಿಮೆಯಿವೆ. ಇಲ್ಲವೇ ಇಲ್ಲ ಅದ್ರೂ ಸರಿನೇ. ಹಾಗಂತ ರಜಿನಿ ತಮ್ಮ ಮ್ಯಾನರಿಸಂ ಬಿಟ್ಟುಕೊಡೋದಿಲ್ಲ. ಅಲಲ್ಲಿ ಝಲಕ್ ಕೊಡ್ತಾನೇ ಹೋಗ್ತಾರೆ. ಚಿಟ್ಟಿ ಅನ್ನೊ ರೋಬೊ ಪಾತ್ರವೇ ಆಗಿರಬಹುದು. ಸಂಶೋಧಕನ ರೋಲೆ ಇರಬಹುದು. ರಜಿನಿ ಎರಡರಲ್ಲೂ ಭಿನ್ನವಾಗಿ ಕಾಣಿಸಿಕೊಳ್ತಾರೆ...ಎರಡನ್ನೂ ಕಂಪೇರ್ ಮಾಡಿದ್ರೆ, ರೋಬೊನೇ ಇಲ್ಲಿ ಗ್ರೇಟ್...



ಐಶ್ವರ್ಯ ರೈ ಬಚ್ಚನ್ ಪ್ರೇಯಸಿಯಾಗಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ರೋಬೊ ರಜಿನಿ ಇರಲಿ. ಡಾಕ್ಟರ್ ರಜಿನಿ ಬಳಿ ಇರಲಿ. ಇಬ್ಬರಿಗೂ ಇಕ್ಕೋಲ್ ಶೇರ್ ಅನ್ನೋ ಹಾಗೆ ಕುಣಿದು ಕುಪ್ಪಳಿಸುತ್ತಾರೆ. ಆದ್ರೂ, ಜಾಸ್ತಿ ಡ್ಯಾನ್ಸ್ ಅಂಡ್ ರೋಮ್ಯಾಂಟಿಕ್ ಸಾಂಗ್ ಇರೊದು ರೋಬೊ ರಜಿನಿ ಜೊತೆಗೇನೆ. ಸೈಂಟಿಸ್ಟ್ ರಜಿನಿ ಜೊತೆಗಿನ ಒಂದು ಹಾಡಿನ ಲೋಕೇಷನ್ ಅದ್ಭುತವಾಗಿವೆ..



ಕಥೆ ರೋಬೊ ಮೇಲೆನೆ ನಿಂತಿದೆ. ರೋಬೊನೆ ಇಲ್ಲಿ ಕಥಾನಾಯಕ. ಹಾಗಾಗಿ ರೋಬೊ ರಜಿನಿಗೆ ಇಲ್ಲಿ ಹೆಚ್ಚು ಕೆಲಸ. ಟ್ರೈನ್ ಫೈಟಿಂಗ್ ನಲ್ಲಿ ರೋಬೊ ಸಾಹಸ ಮೆಚ್ಚುವಂತದ್ದು. ಡ್ಯಾನ್ಸ್ ಕೂಡ ಸೂಪಬ್. ಇನ್ನು ಪ್ರೀತಿಸೋದೊ, ಇದಂತು ನಿಜಕ್ಕೂ ಪಾಗಲ್ ಪ್ರೀತಿ. ನಾಶವಾಗಿ ತಿಪ್ಪಿಯಲ್ಲಿ ಬಿದ್ದರೂ ಕರಗದ ಪ್ರೇಮ ಪರ್ವ ರೋಬೊ ರಜಿನಿಯದ್ದು..



ಇಷ್ಟೆಲ್ಲ ಆದ್ಮೇಲ್ಲೂ ಇನ್ನೊಂದು ವಿಷಯ ಹೇಳೊದೊ ಮರೆತೆ. ಚಿತ್ರದ ಪ್ರಮುಖ ಎಳೆ ಸ್ಟ್ರಾಂಗ್ ಆಗಿದೆ. ಮನುಷ್ಯರಷ್ಟೇ ಅಲ್ಲ. ಅಡ್ವಾನ್ಸ್ಡ್ ರೋಬೊಗಳಿಗೂ "ಫೀಲಿಂಗ್ಸ್" ಮೂಡಿಸಬಹುದೆಂಬ ಕಲ್ಪನೆ ಇಲ್ಲಿಯ ಕಥೆ ಮೂಲ ಎಳೆ. ಆದ್ರೂ, ಕ್ಲೈಮ್ಯಾಕ್ಸ್ ಯಾಕೋ ಅತೀಯಾಯಿತು ಅನಿಸಿತು. ನೀವೂ ಒಮ್ಮೆ ಸಿನೆಮಾ ನೋಡಿ. ಒಂಚೂರು ಹೊಸ ಅನುಭವ ನಿಮಗೂ ಆಗಬಹುದು...



-ರೇವನ್ ಪಿ.ಜೇವೂರ್