ನೆನಪಿದೆಯಾ ಓ ಗೆಳತಿ. ನಾ ನಿನಗೆ ಪ್ರೀತಿಸಿದ್ದು. ನೆನಪಿದೆಯಾ ಗೆಳತಿ ನಾ ನಿನ್ನ ಜೀವ ಎಂಬುದು. ನೆನಪಿದೆಯಾ ಗೆಳತಿ..ನಿನಗಾಗಿ ನಾ ಕಣ್ಣೇ ಕಳೆದು ಕೊಂಡದ್ದು... ಇಲ್ಲ ಬಿಡು. ನೀನು ತಿಳಿಯಲು ಹೇಗೆ ಸಾಧ್ಯ. ನೀನು ಆಗ ಮದುವೆ ಸಂಭ್ರಮದಲ್ಲಿದ್ದೆ. ಪಕ್ಕದಲ್ಲಿದ್ದ ಗಂಡನ ಮಡಿಲ ಸೇರುವ ತವಕದಲ್ಲಿದ್ದೆ. ನನ್ನ ಬಿಟ್ಟು ಅಪ್ಪ-ಅಮ್ಮ ತೋರಿದ ಗಂಡನಿಂದ ತಾಳಿ ಕಟ್ಟಿಸಿಕೊಂಡು ಸೇಫ್ ಆಗಿದ್ದೇ. ನಾನು...ನಿನ್ನ ಆ ಪ್ರೀತಿಯಲ್ಲಿ ಕಣ್ಣು ಕಳೆದುಕೊಂಡೆ...ನಿನ್ನ ಪ್ರೀತಿಯ ಬಿಂಬದಲ್ಲಿಯೆ ಇನ್ನು ಕನಸು ಕಾಣುತ್ತಿದ್ದೇನೆ..ನೆನಪಿದೆಯಾ ಓ ಗೆಳತಿ..ಈ ಮೇಲಿನ ಸಾಲುಗಳು ನಿಮಗೆ ಯಾರನ್ನೋ ನೆನಪಿಸುತ್ತವೆ. ಹೌದು....! ಮೇಲಿನ ಪ್ರತಿ ಸಾಲುಗಳು ಮಂಡ್ಯದ ರಘುವಿನ ಪ್ರೀತಿಯ ಕ್ರೂರ ಫಲಗಳೇ ಆಗಿವೆ. ಪ್ರೀತಿಸಿದವಳು...ಜೊತೆ..ಜೊತೆಗೆ ಓಡಾಡಿದವಳು...ಪ್ರೀತಿಯಿಂದ ಮುತ್ತಿಕ್ಕಿದವಳು ಇನ್ನಾರದೋ ಬಾಹುಬಂಧನದಲ್ಲಿದ್ದಾಳೆ. ಆದರೆ, ರಘು ಸದ್ಯ ಕಣ್ಣು ಕಳೆದುಕೊಂಡು ನಾರಾಯಣ ನೇತ್ರಾಲಯದಲ್ಲಿ ಕುರುಡು ಕನಸು ಕಾಣುತ್ತಿದ್ದಾನೆ. ಅನುಷಾ ಬಂದೇ ಬರುತ್ತಾಳೆ...ಪ್ರೀತಿಸುತ್ತಾಳೆಂಬ ನಿರೀಕ್ಷೆಯಲ್ಲಿದ್ದಾನೆ...
ರಘುವಿನ ಈ ಸ್ಟೋರಿ ಕೇಳಿ ಎಲ್ಲರ ಮನವೂ ಕಲುಕಿದೆ. ಗಾಂಧಿನಗರದ ಮಂದಿಯ ಮನವೂ ರೋಧಿಸಿದೆ. ಕೆಲವರು ರಘುನ್ನ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ಮಧ್ಯೆ ನಿರ್ದೇಶಕ ಎಸ್.ನಾರಾಯಣ ರಘು ಕಣ್ಣೀರ ಕತೆಯನ್ನ ಚಿತ್ರ ಮಾಡಲು ಹೊರಟ್ಟಿದ್ದಾರೆ. ಎಲ್ಲರಂತೆ ಈ ನಾಣಿಗೂ ರಘು ಕತೆ ಟಚ್ ಆಗಿದೆ. ಕ್ರೂರತೆಯ ಪರಮಾವದಿ ಅನಿಸಿದೆ. ಪ್ರತಿಷ್ಠೆಯ ಪರಾಕಾಷ್ಠೆ ಎಂದೆನಿಸಿದೆ. ಅದಕ್ಕೆನೆ 'ನೆನಪಿದೆಯಾ ಓ ಗೆಳತಿ' ಟೈಟಲ್ ನ ಸಿನಿಮಾ ಮಾಡಲು ಈಗ ಮುಂದಾಗಿದ್ದಾರೆ...
ರಘುವಿನ ರಿಯಲ್ ಲೈಫ್ ಕತೆನೆ ಇಲ್ಲಿ ಚಿತ್ರವಾಗ್ತಿದೆ. ಗಾಂಧಿನಗರದ ಗಿಮ್ಮಿಕ್ ಆಗಲಿ. ಚತ್ರರಂಗದ ಕಲರ್ ಆಗಲಿ ಇರದೇ ನೈಜ ರೀತಿಯಲ್ಲಿಯೇ 'ನೆನಪಿದೆಯಾ ಓ ಗೆಳತಿ' ತೆರೆಗೆ ಬರಲಿದೆ, ಹಾಗಂತ ನಾರಾಯಣ್ ಭರವಸೆ ನೀಡಿದ್ದಾರೆ. ತಮ್ಮ ಪುತ್ರನೇ ರಘು ಪಾತ್ರ ಮಾಡಲಿದ್ದಾನೆಂಬ ಸುದ್ದಿಯನ್ನೂ ಬಹಿರಂಗ ಪಡಿಸಿದ್ದಾರೆ. ರಘು ಮತ್ತು ಅನುಷಾ ಸ್ಟೋರಿಯ ಇನ್ನಷ್ಟು ವಿಷ್ಯಗಳನ್ನ ತಿಳಿದುಕೊಂಡು ಮುಂದುವರೆಯಲಿದ್ದಾರೆ. ಒಂದೊಳ್ಳೆ ಸಂದೇಶವನ್ನೂ ನೀಡುವ ಹಂಬಲವೂ ಇದೆ. ಆಯಾ ಸ್ಥಳಕ್ಕೆ ಹೋಗಿಯೇ ಎಲ್ಲವನ್ನೂ ಕುಲಂಕಷವಾಗಿ ತಿಳಿದುಕೊಂಡು ಚಿತ್ರ ಮಾಡುವ ಪ್ಲಾನೂ ಇದೆ. ಇನ್ನುಳಿದಂತೆ ಸದ್ಯಕ್ಕೆ ಎಸ್.ನಾರಾಯಣ ಕತೆ ಬರೆಯಲು ಕುಳಿತಿದ್ದಾರೆ...
ರೇವನ್ ಪಿ.ಜೇವೂರ್