ರೂಪಿಕಾ....ಈಗ ಕಾಲ್ಗೆಜ್ಜೆ ನಾದ ಪಕ್ಕದ ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಇಲ್ಲಿಯ ನೆಲ ಬೇಸರ ತಂದಿತೋ..ಆಫರ್ ಬಂತು ಅಂತ ಆ ಕಡೆ ಹೆಜ್ಜೆ ಇಟ್ಟರೋ..ರಿಯಲ್ ಕತೆಗೆ ಈ ಹುಡುಗಿನೇ ನಾಯಕಿ. ಅಮರ್ ಎಂಬ ಯುವಕ ಬೆಂಗಳೂರಿನ ತಾರೆಗೆ ಜೋಡಿಯಾಗಿದ್ದಾನೆ...
ವಿಷ್ಯ ಇಷ್ಟೇ,ಅಲ್ಲ. ಇನ್ನು ವಿಶೇಷವಾದದ್ದೂ ಇದೆ. ಅದುವೇ ನಮ್ಮ ಕನ್ನಡದ ಚರಣ್ ರಾಜ್. ಸದ್ಯಕ್ಕೆ ಕಾಲಿವುಡ್ ಮತ್ತು ಟಾಲಿವುಡ್ ನ ಚಿತ್ರಗಳಲ್ಲಿ ಬ್ಯೂಝಿಯಾಗಿರುತ್ತಾರೆ. ಕನ್ನಡದ ಸ್ವಯಂಕೃಷ್ಣ ಚಿತ್ರದಲ್ಲೂ ಅಭಿನಯಿಸಿ ಹೋಗಿದ್ದಾರೆ. ಆದ್ರೆ ಅದೇನೋ ಈಗ ರಿಯಲ್ ಲವ್ ಸ್ಟೋರಿಯ ಹಾಡೊಂದು ಚರಣ್ ರಾಜ್ ಮೇಲೆ ಪ್ರಭಾವ ಬೀರಿದೆ. ಅದರ ಫಲವೇ..ರೂಪಿಕಾ-ಅಮರ್ ಜೋಡಿಯ
`ಯರ್ಥಾತ ಪ್ರೇಮಕತಾ' ಚಿತ್ರ..
ನಾಗರಾಜು ಮತ್ತು ಅನಿತಾ ಲವ್ ಸ್ಟೋರಿ ಹೈದ್ರಾಬಾದ್ ನಲ್ಲಿ ಫುಲ್ ಫೇಮಸ್. ನಾಗರಾಜು ರಾಗ ಸಂಯೋಜಿ
ಸಿ ಬರೆದ ಅನಿತಾ..ಓ ಅನಿತಾ ಹಾಡು ಈಗಲೂ ಪ್ರಚಲಿತ. ಈ ಒಂದು ಹಾಡನ್ನ ಕೇಳಿಯೆ ಕನ್ನಡಿಗ ಚರಣ್ ರಾಜ್ ನಾಗರಾಜು ಮತ್ತು ಅನಿತಾ ಪ್ರೇಮ ಕತೆ ಮೇಲೆ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ನಿರ್ಮಾಣ ಮಾಡೋದರೊಟ್ಟಿಗೆ ನಿರ್ದೇಶನವನ್ನೂ ಮಾಡ್ತಿದ್ದಾರೆ.
ನಾಗರಾಜು ಮತ್ತು ಅನಿತಾ ಲವ್ ಸ್ಟೋರಿ ಹೈದ್ರಾಬಾದ್ ನಲ್ಲಿ ಫುಲ್ ಫೇಮಸ್. ನಾಗರಾಜು ರಾಗ ಸಂಯೋಜಿ
ಸಿ ಬರೆದ ಅನಿತಾ..ಓ ಅನಿತಾ ಹಾಡು ಈಗಲೂ ಪ್ರಚಲಿತ. ಈ ಒಂದು ಹಾಡನ್ನ ಕೇಳಿಯೆ ಕನ್ನಡಿಗ ಚರಣ್ ರಾಜ್ ನಾಗರಾಜು ಮತ್ತು ಅನಿತಾ ಪ್ರೇಮ ಕತೆ ಮೇಲೆ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ನಿರ್ಮಾಣ ಮಾಡೋದರೊಟ್ಟಿಗೆ ನಿರ್ದೇಶನವನ್ನೂ ಮಾಡ್ತಿದ್ದಾರೆ.ಇನ್ನಷ್ಟು ಸಂಗತಿಗಳೆಂದ್ರೆ, ರಿಯಲ್ ಪ್ರೇಮಿ ನಾಗರಾಜು ಚಿತ್ರಕ್ಕೆ ಎರಡು ಹಾಡು ಬರೀತಾಯಿದ್ದಾನೆ. ಅನಿತಾ ಓ ಅನಿತಾ ಸಿನಿಮಾದಲ್ಲಿ ಇದ್ದೇ ಇರುತ್ತದೆ. ಇದೇ ಜುನ್ ೬ ರಂದು ಚಿತ್ರ ಸೆಟ್ಟೇರುತ್ತಿದೆ. ಆಗಿನಿಂದ ಹಿಡಿದು..ಚಿತ್ರೀಕರಣ ಪೂರ್ಣಗೊಳ್ಳುವವರೆಗೂ ನಾಗರಾಜು ಫಿಲ್ಮಿ ಲವರ್ಸ್ ಗೆ ತಮ್ಮ ಲವ್ ಬಗ್ಗೆ ಗೈಡನ್ಸ್ ಕೊಡಲಿದ್ದಾರೆ...
ಆದ್ರೆ, ಅನಿತಾ ಏನ್ ಆದಳು...ನಾಗರಾಜು ಏನೆಲ್ಲ ಫೇಸ್ ಮಾಡಿದ. ಎಲ್ಲವೂ ತೆರೆ ಮೇಲೆ ಬರಲಿದೆ. ಕನ್ನಡ ಹೊರತಾಗಿ ತಮಿಳು..ತೆಲುಗು ಭಾಷೆಯಲ್ಲಿ ಅನಿತಾ-ನಾಗರಾಜು ಕತೆ ತೆರೆಗೆ ಬರುತ್ತಿದೆ. ಕನ್ನಡಕ್ಕೆ ಯಾರು ತರುತ್ತಾರೋ ನೋಡಬೇಕು.
-ರೇವನ್ ಪಿ.ಜೇವೂರ್
No comments:
Post a Comment