Wednesday, June 30, 2010

ಶ್ರುತಿ ಅಳೋದು ಬಿಟ್ಟಿದ್ದಾರೆ...


ಕನ್ನಡದ ತಾರೆ ಶ್ರುತಿ ಈಗ ಅಳೊದನ್ನ ಬಿಟ್ಟಿದ್ದಾರೆ. ಅಂದ್ರೆ, ಇದು ಆಫ್ ಸ್ಕ್ರಿನ್ ಕಥೆಯಲ್ಲ. ಆನ್ ಸ್ಕ್ರೀನ್ ಪುರಾಣ. ಕನ್ನಡ ಸಿನಿಪ್ರಿಯರಿಗೆ ಶ್ರುತಿ ಕಣ್ಣಿರ ಧಾರೆಯಿಂದಲೆ ಹೆಚ್ಚು ಚಿರಪರಿಚಿತ. ಹೆಣ್ಣುಮಕ್ಕಳ ಹೃದಯ ಕದ್ದು...ಗೆದ್ದ ನಟಿಯಿಕೆ. ಆದ್ರೆ, ನಿಜಜೀವನದಲ್ಲೂ ಕಣ್ಣಿರ ಕಥೆಗಳು ಸೃಷ್ಟಿಯಾಗಿದ್ದು ಗೊತ್ತೆಯಿದೆ. ಆದ್ರೂ, ಸದ್ಯಕ್ಕೆ ಶ್ರುತಿ ಅಳುವುದನ್ನ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇದರರ್ಥ ಶ್ರುತಿ ಚಿತ್ರ ನೋಡಿದ ಪ್ರೇಕ್ಷಕರಿಗೆ ಇನ್ಮುಂದೆ ಕಣ್ಣುಗಳು ತೇವಗೊಳ್ಳುವುದಿಲ್ಲ.ಕಣ್ಣೀರಧಾರೆ ಹರೆಯೋದೇಯಿಲ್ಲ..

ಇಂತಹ ಒಂದು ಸ್ಟ್ರಾಂಗ್ ಡಿಸಿಜೆನ್ ತೆಗೆದುಕೊಂಡಂತಿದೆ. `ನಮ್ಮ ಕಲ್ಯಾಣಿ' ಅನ್ನೊ ಚಿತ್ರದಲ್ಲಿ ಶ್ರುತಿ ಅಳೋದೇಯಿಲ್ಲ. ಚಿತ್ರವಿಡಿ ಈಕೆಯ ಅಭಿನಯ ಇತರರು ಅಳುವಂತೆ ಮಾಡ್ತವೆ. ಹೊರತು ಥೀಯಟರ್ ನಲ್ಲಿ ಕುಳಿತ ಯಾವುದೇ ಒಬ್ಬ ಮಹಿಳಾ ಪ್ರೇಕ್ಷಕಿಯ ಕಣ್ಣು ಒದ್ದೆಯಾಗುವುದಿಲ್ಲ. ಜೊತೆಗೆ ತಂದ ಕರ್ಚಿಫೂ ಸೇಫ್ ಅಂಡ್ ಸೇಫ್...

ನಾಗಮ್ಮ ಅನ್ನೋ ಕ್ಯಾರೆಕ್ಟರ್ ನಲ್ಲಿ ಶ್ರುತಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ಪುಟ್ಟಣ್ಣ ಶೂಟಿಂಗ್ ಮನೆ'ಯಲ್ಲಿ ಚಿತ್ರದ ಶೂಟಿಂಗ್ ನಡೀತಾಯಿತ್ತು. ಕ್ಲೈಮ್ಯಾಕ್ಸ್ ಸೀನ್ ನ ಚಿತ್ರೀಕರಣದಲ್ಲಿ ಇಡೀ ಟೀಮ್ ಬ್ಯುಜಿಯಾಗಿತ್ತು. ಕೋರ್ಟ್ ಸೀನ್ ಈ ದೃಶ್ಯದಲ್ಲಿ ಶ್ರುತಿ ನಿಭಾಯಿಸಿದ ನಾಗಮ್ಮ ಕ್ಯಾರೆಕ್ಟರ್ ಎಂತದ್ದು ಅನ್ನೋ ಸಂಗತಿನೂ ಗೊತ್ತಾಯಿತು. ಅಂದ್ರೆ, ಶ್ರುತಿಯ ಈ ಪಾತ್ರ ಕಟೋರ ಹೃದಯದ...ಸೋಮಾರಿ ಅಮ್ಮನ ಲೇಪನ ಇರೋ ಮಹಾನ್ ಬಡವಿ ಪಾತ್ರವಿದು. ಮಗಳನ್ನ ಮಾರೀಯಾದ್ರೂ ಹೊಟ್ಟೆ ತುಂಬಿಸಿಕೊಳ್ಳುವ ಜಾಯಮಾನದ ನಾಗಮ್ಮ ಈಕೆ...

ತೆರೆ ಮೇಲಿನ ನಾಗಮ್ಮ ಹೀಗೆನೋ ಇದ್ದಾಳೆ. ಹಾಗಾಗಿ ಇಲ್ಲಿ ಕಣ್ನೀರು ಸುರಿಸೋ ಪ್ರಮೇಯವೇ ಇಲ್ಲ. ಆದ್ರೂ, ಎಂದಿನಂತೆ ಶ್ರುತಿ ಈ ಚಿತ್ರದಲ್ಲಿ ಒಂದಷ್ಟು ಕಣ್ಣು ತೇವಗೊಳಿಸಿಕೊಳ್ತಾರಂತೆ.ಹೀಗೆ ಅತ್ತಾಗಲೇ ಚಿತ್ರ ಶುಭಂ...


ಚಿತ್ರದ ಶೂಟಿಂಗ್ ನಲ್ಲಿ ಶ್ರುತಿ ನಕ್ಕಿದ್ದೆ ಜಾಸ್ತಿ..ನಗಿಸುದು ಕೂಡ ಸಿಕ್ಕಾಪಟ್ಟೆ. ಕೋರ್ಟ್ ದೃಶ್ಯ ಶೂಟ್ ಮಾಡುವಾಗ ಅಲ್ಲಿ ಸಿಕ್ಕಾಪಟ್ಟೆ ಲೈಟ್ಸ್ ಗಳಿದ್ದವು. ಇದರಿಂದ ವಕೀಲ್ ಪಾತ್ರ ನಿರ್ವಹಿಸಿದ್ದ ಇಬ್ಬರೂ ಕಲಾವಿದರು ಆಗ ಬೆರವಿನಿಂದ ತತ್ತರಿಸಿ ಹೋಗಿದ್ದರು. ಇದನ್ನ ನೋಡಿದ ಶ್ರುತಿ ಸ್ಪಾಟ್ ನಲ್ಲಿ ನಗೆ ಚಟಾಕೆ ಹಾರಿಸಿದರು. ಕಟ್ಕಟೆಯಲ್ಲಿ ನಿಂತ ನಾನು ಅಪರಾಧಿ. ಆದ್ರೆ, ಪ್ರಶ್ನೆ ಕೇಳುವ ವಕೀಲರೇ ಬೆವರುತ್ತಿದ್ದಾರಲ್ಲ ಅಂತ ಹೇಳಿ ಗರಂ ಆಗಿದ್ದ ಶೂಟಿಂಗ್ ತಂಡವನ್ನ ಒಂಚೂರು ಕೂಲ್ ಮಾಡಿದ್ರು...

ತೆರೆ ಮೇಲೆ ಅತ್ತರೂ ತೆರೆಯ ಹಿಂದೆ ಕಲಾವಿದರು ನಗು..ನಗುತ್ತಲೇ ಕೆಲಸ ನಿರ್ವಹಿಸುತ್ತಾರೆ. ಅದು ಅಳುವುದಿರಲಿ...ಬಿದ್ದು...ಬಿದ್ದು ನಗಿಸೋದಿರಲಿ. ಎಲ್ಲವನ್ನೂ ಒಂದೇ ಸಮನೇ ತೆಗೆದುಕೊಳ್ಳುತ್ತಾರೆ...ತಮ್ಮ ಮನರಂಜನಾ ಕೆಲಸವನ್ನ ಚಾಚು ತಪ್ಪದೇ ನಿರ್ವಹಿಸುತ್ತಿದಾರೆ...ಇದುವೇ ಕಲಾವಿದರ ಬದುಕಾ..ಗೊತ್ತಿಲ್ಲ..ತೆರೆ ಮೇಲೆ ಇವರ ನೈಜ ಬುದಕು ಕಾಣೊದಿಲ್ಲ ಅಲ್ಲವೇ...

-ರೇವನ್ ಪಿ.ಜೇವೂರ್

Sunday, June 27, 2010

ತಾರೆಯರ ಒಲವೇ ಸಾಕ್ಷಾತ್ಕಾರ....


ನಮ್ಮ ಹಳೆ ನಟಿಯರು ಅದೆಷ್ಟು ಚೆಂದ ಅಂತೀರಾ. ಈಗಿನ ನಾಯಕಿಯರನ್ನ ಅವರಿಗೆ ಹೋಲಿಸಲೂ ಸಾಧ್ಯವೇಯಿಲ್ಲ. ಅಷ್ಟು ಚೆಂದ ಅವರ ಸೌಂದರ್ಯ. ಅವರ ನಡೆ.ನುಡಿ..ಹಾವ-ಭಾವ. ಕಣ್ಣರಳಿಸುವ ಚೆಲುವು. ಈಗಲೂ ಒಂದು ಅದ್ಭತು ಕಲ್ಪನೆನೇ ಬಿಡಿ. ಇಂತಹ ಕಲಾವಿದರಲ್ಲಿ ನಮ್ಮ ಕನ್ನಡತಿಯರು ಅನೇಕರು. ಬಿ.ಸರೋಜಾ ದೇವಿಯಂತಹ ಚೆಲುವಾಂತ ಚೆಲುವೆಯನ್ನ ಅನೇಕರು ಮೆಚ್ಚಿದ್ದಾರೆ. ಕನ್ನಡದ ನೆಲದಲ್ಲಿ ಹುಟ್ಟಿದ ಜಮುನಾ ಕೂಡ ಅಂದ-ಚೆಂದಕ್ಕೆ ಒಂದು ಸಾಕ್ಷಾತ್ಕಾರ. ಹರಿಣಿಯಂತ ನಟಿಯೂ ಸಹ ಇದೇ ಸಾಲಿಗೆ ಸೇರುವ ಮತ್ತೊಂದು ಸುಂದರ ಶಿಲ್ಪ. ಕನ್ನಡತಿಯಲ್ಲದ ಅಗಿನ ಡಾ.ಅಂಜಿಲೀದೇವಿ ಸಹ ಈ ಸಾಲಿನ ಮತ್ತೊಂದು ಸುಂದರ ಸ್ಪರ್ಶ..

ಈ ಅಂದದ ಗೊಂಬೆಗಳಿಗೆ ಈಗ ವಯಸ್ಸಾಗಿದೆ. ಆ ಕಾಲದ ಚಿತ್ರ ರಸಿಕರ ಮನದಲ್ಲಿ ಹಾಗೇ ಉಳಿದಿರುವ ಈ ಕಲಾಮಣಿಗಳ ಮೊಮ್ಮಕ್ಕಳು ಬೆಳದು ನಿಂತಿದ್ದಾರೆ.ಇಷ್ಟಂದ್ಮೇಲೆ ಅದೆಷ್ಟು ವಸಂತಗಳು ಕಳೆದು ಹೋಗಿವೆ ಅಂತಹ ಊಹಿಸಿಕೊಳ್ಳಿ. ಆದ್ರೂ, ಒಂದು ಸತ್ಯ ರೀ..ಕಲಾವಿದರಿಗೆ ವಯಸ್ಸೇ ಆಗೋದಿಲ್ಲ. ಪದ್ಮಭೂಷಣ ಡಾ.ಬಿ.ಸರೋಜಾ ದೇವಿಯವರನ್ನ ನೋಡಿ ಅದೇ ಚೆಲುವು ಕಂಗೊಳಿಸುತ್ತದೆ.ಅದೇ ಕಲಾಸಕ್ತಿ ಉಕ್ಕುತ್ತದೆ...
ಹರಿಣಿಯವರನ್ನ ನೋಡಿದಾಗಲೂ ಇದೇ ಭಾವ ಮೂಡುತ್ತದೆ. ಅದೇ ಪುರಾಣ ಚೆಲುವು..ಅದೇ ಪುರಾತನ ಸಭ್ಯತೆ ಎದ್ದು ಕಾಣುತ್ತದೆ. ಜಮುನಾ ಅವರು ಸ್ವಲ್ಪ ಬದಲಾಗಿದ್ದಾರೆ. ಸಾಕ್ಷಾತ್ಕಾರದ ಜಮುನಾ ಇವರೇ ನಾ ಅಂತಾ ಒಂಚೂರು ಅನುಮಾನ ಬರುತ್ತದೆ. ಆದ್ರೆ, ಅದೇ ಜಮುನಾ ಮಾತಿಗಳಿದರೆ ಮುಗಿಯಿತು...

ಹಳೆ ದಿನಗಳು ಹಚ್ಚ ಹಸಿರಾಗುತ್ತವೆ. ಅಷ್ಟೊಂದು ಸುಂದರವಾಗಿಯೇ ವಾಕ್ಯಗಳ ಜೋಡಣೆ ಅವರ ಮಾತಲ್ಲಿ ಇರುತ್ತದೆ. ಇದೇನೋ ಸರಿ, ಇವರೆಲ್ಲ ನಿಮಗೆಲ್ಲಿ ಸಿಕ್ಕಿದರು ಅನ್ನೋ ಪ್ರಶ್ನೆ ನಿಮಗೆ ಈಗಾಗಲೇ ಮೂಡಿರಬಹುದು. ಹೌದು....! ಬಿ.ಸರೋಜಾ ದೇವಿ ಯವರು ಈ ಮೂವರು ತಾರೆಯರನ್ನ ಒಟ್ಟಿಗೆ ಸೇರಿಸುವ ಕೆಲಸ ಮಾಡಿದ್ದರು.ತಮ್ಮದೇ ಹೆಸರಲ್ಲಿ ನೀಡುವ ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಮಭದಲ್ಲಿ ಇವರೆಲ್ಲ ಒಂದೇ ವೇದಿಕೆಯಲ್ಲಿ ಮಿನುಗುತ್ತಿದ್ದರು...
ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಈ ಹಳೆ ತಾರೆಯರ ಧನ್ಯ ಸಂಗಮ ಕಪ್ಪು-ಬಿಳುಪು ಚಿತ್ರದಷ್ಟೇ ಸುಂದರವಾಗಿತ್ತು.ಇಂತಹ ಒಂದು ವೇದಿಕೆಯನ್ನ ಈ ನಟಿಯರು ಚೆನ್ನಾಗಿಯೇ ಬಳಸಿಕೊಂಡರು. ತಮ್ಮ ಆ ದಿನಗಳ ಮಧುರ...ಮಧುರ ಆ ಮಂಜುಳಗಾನ ದಂತಹ ಸವಿ ಸವಿ ನೆನಪಿನ ಬುತ್ತಿಯನ್ನ ಇಲ್ಲಿ ಬಿಚ್ಚಿಟ್ಟರು.ಬಿ.ಸರೋಜಾ ದೇವಿಯಂತು ತಮ್ಮ ಈ ನೆಚ್ಚಿನ ನಟಿಯರಿಂದ ಏನೆಲ್ಲ ಕಲೆಯನ್ನ ಕಲಿತೆಯಂತ ಹೇಳಿಕೊಂಡ್ರು. ಮದ್ರಾಸ್ ನ ಆ ದಿನಗಳಲ್ಲಿ ಒಂದೇ ಕಡೇ ಹಲವು ಚಿತ್ರಗಳು ಶೂಟಿಂಗ್ ಆಗ್ತಿದ್ದವು.ಇಂತಹ ದಿನಗಳಲ್ಲಿ ಸರೋಜಾ ದೇವಿಯವರು ಡಾ.ಅಂಜಿಲಿದೇವಿಯರರಿಂದ ಸಾಕಷ್ಟು ಅಭಿನಯವನ್ನ ಕಲಿತಿದ್ದಾರೆ. ಹಾಗಂತ ಅಂಜಿಲಿದೇವಿ ಸರೋಜಾ ಅವರ ಗುರುಗಳಲ್ಲ. ಸ್ಟುಡಿಯೋದಲ್ಲಿ ಚಿತ್ರೀರಕಣದ ವೇಳೆ ಅಲ್ಲಿಗೆ ಹೋಗಿ ನಟನೆಯ ತಿಳಿದುಕೊಂಡಿದ್ದಾರೆ.

ಅಂಜಿಲಿಯಮ್ಮನ ಥರವೇ ಹರಿಣಿ..ಜಮುನಾ ಅವರ ಕಲಾರಾಧನೆ ಮನೋಜ್ಞ ಅಭಿನಯ ಸರೋಜಾದೇವಿಯರಿಗೆ ಸ್ಪೂರ್ತಿಯಾಗಿದೆ. ಇದೇ ಒಂದು ಒಲವಿನಿಂದಲೋ ಏನೋ. ಸರೋಜಾ ದೇವಿಯವರು ತಾವು ದುಡಿದ ದುಡ್ಡಿನಲ್ಲಿಯೇ ತಮ್ಮ ಹೆಸರಿನ ರಾಷ್ಟ್ರ ಪ್ರಶಸ್ತಿಯನ್ನ ನೀಡಿದ್ದಾರೆ.ತಲಾ ಒಂದೊಂದು ಲಕ್ಷ ನಗದು ಹಣವನ್ನೂ ನೀಡಿ ಈ ಮೂವರು ತಾರೆಯರನ್ನ ಗೌರವಿಸಿದ್ದಾರೆ..

ಇವರ ಕಾರ್ಯ ಇದೇ ರೀತಿನೇ ಮುಂದುವರೆಯಲಿದೆ. ಭಾರತೀಯ ವಿದ್ಯಾಭವನ ಸರೋಜಾ ದೇವಿ ಇಲ್ಲದೇ ಇದ್ದರೂ ಸಹ ಮಹಿಳಾ ಕಲಾವಿದೆಯರನ್ನ ಹುಡುಕಿಕೊಂಡು ಸೂಕ್ತ ವ್ಯಕ್ತಿಗಳಿಗೆ ಪದ್ಮಭೂಷಣ ಸರೋಜಾ ದೇವಿ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲಿದೆ. ಈ ಒಂದು ಹೊಸ ಹೆಜ್ಜೆ ಸರೋಜಾ ದೇವಿಯವರ ಚಿತ್ರಪಯಣದಲ್ಲಿಯ ಕಲಾರಾಧನೆಯ ಹೊಸ ಸಾಕ್ಷಾತ್ಕಾರದ ಪ್ರತೀಕದಂತಿದೆ....

-ರೇವನ್ ಪಿ.ಜೇವೂರ್

Wednesday, June 23, 2010

ದರ್ಬಾರ್ ಇದು ಕಾಮಿಡಿ ದರ್ಬಾರ್...



ಕನ್ನಡ ಕಾಮಿಡಿಯನ್ ಯಾರು..ಇಂತಹ ಪ್ರಶ್ನೆಗಳಿಗೆ ಈಗ ಹಲವು ಉತ್ತರಗಳು ಸಿಗುತ್ತವೆ. ಆಗ ಕೇವಲ ಕೆಲವೇ ಕೆಲವು. ನರಸಿಂಹರಾಜು,ದಿನೇಶ್,ಮುಸ್ರಿಕೃಷ್ಣಮೂರ್ತಿ, ಆದರೆ, ಇವರ ಕಾಲ ಇತಿಹಾಸ ಪುಟ ಸೇರಿದ ನಂತರ ಅನೇಕರು ಬಂದರು. ಈಗಲೂ ಬರುತ್ತಿದ್ದಾರೆ.ಚಿತ್ರದ ನಾಯಕರೂ ಹಾಸ್ಯ ಮಾಡುವುದನ್ನ ಕಲೆತಿದ್ದಾರೆ. ರಮೇಶ್ ಅರವಿಂದ್ ಅಂತಹ ನಟರು ಕಾಮಿಡಿ ಟೈಮಿಂಗ್ ಟ್ರೈ ಮಾಡುವ ನಾಯಕ ಅಂದ್ರೆ, ತಪ್ಪಾಗೋದಿಲ್ಲ. ಸಾಧು ಕೋಕಿಲ ರಂತಹ ನಟರಿಗೆ ಲ್ಯಾಂಗ್ಜೇಜೆ ಬೇಡ. ಸ್ಕ್ರೀನ್ ಮೇಲೆ ಬಂದರೆ ಸಾಕು. ನಗೆ ತಾನೇ ಚಿಮ್ಮುತ್ತದೆ. ರಂಗಾಯಣ ರಘು ಎಲ್ಲ ಥರದ ಕ್ಯಾರೆಕ್ಟರ್ ಹ್ಯಾಂಡಲ್ ಮಾಡಿ ಕಾಮಿಡಿ ಮಾಡಬಲ್ಲ ಚತುರ ಕಲಾಕಾರ್...

ಇವರಲ್ಲಿ ಈ ಮೂವರು ಒಟ್ಟಿಗೆ ಸೇರಿ ಒಂದೇ ಸ್ಕ್ರೀನ್ ಮೇಲೆ ಬಂದರೇ ಹೇಗೆ. ಇಂತಹದ್ದೇ ಒಂದು ಕೆಲಸ ಕನ್ನಡದಲ್ಲಿ ನಡೆದಿದೆ.`ಹೆಂಡ್ತಿರ್ ದರ್ಬಾರ್' ಚಿತ್ರದಲ್ಲಿ ಸಾಧು ಕೋಕಿಲ್ ಮತ್ತು ರಂಗಾಯಣ ರಘು ನೆರೆ ಹೊರೆಯವರಾಗಿದ್ದಾರೆ. ಇವರ ಮಧ್ಯೆ ನಾಯಕ ರಮೇಶ್ ಅರವಿಂದ್ ಅವರ ಕಾಮಿಡಿ ಟಚ್ ಬೇರೆ.
ಇಷ್ಟಂದ್ರೆ ಹೇಳಬೇಕೆ.ಕೌಟುಂಬಿಕ ಸಮಸ್ಯೆಗಳ ಜೊತೆ..ಜೊತೆಗೆ ಖ್ಯಾತ್ ನಿರ್ದೇಶಕ ವಿ.ಶೇಖರ್ ಹಾಸ್ಯಲೇಪತಿ ಚಿತ್ರ ಮಾಡಿದ್ದಾರೆ.

ಆದ್ರೆ, ನಿಮಗೆ ಈಗಾಗಲೆ ಅನಿಸಿರಬಹುದು. ಕನ್ನಡದಲ್ಲಿ ವಿ.ಶೇಖರ್ ಅನ್ನೊ ನಿರ್ದೇಶಕರೇ ಇಲ್ಲವಲ್ಲ.ಯಾರಿದು ಅಂತ ನಿಮ್ಮಲ್ಲಿ ಪ್ರಶ್ನೆ ಹುಟ್ಟಿಕೊಂಡಿರಬಹುದು. ನಿಜ, ಇವರು ಕನ್ನಡದವರಲ್ಲ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರು. ಸರಿ ಸುಮಾರು 18 ಚಿತ್ರಗಳನ್ನ ಮಾಡಿದ್ದಾರೆ.ತಮಿಳನಲ್ಲಿ ಇವರ ಈ 18 ಸಿನೆಮಾಗಳಲ್ಲಿ ಬಹುತೇಕ ಚಿತ್ರಗಳು ಹಿಟ್ ಆಗಿವೆ. ಅದೇ ಚಿತ್ರಗಳಲ್ಲಿ ಕೆಲವು ಕನ್ನಡಕ್ಕೂ ಬಂದಿವೆ. ಮುದ್ದಿನ ಮಾವ,ಯಾರಿಗೆ ಸಾಲುತ್ತೇ ಸಂಬಳಗಳಂತಹ ಕನ್ನಡದ ಕೌಟುಂಬಿಕ ಚಿತ್ರಗಳೆಲ್ಲ ಇವರ ಅನುಭವದಿಂದಲೇ ಹೊರಹೊಮ್ಮಿ ಕನ್ನಡಕ್ಕೆ ಬಂದಿವೆ.

ಕನ್ನಡದ ಹೆಂಡ್ತಿರ್ ದರ್ಬಾರ್ ಕೂಡ ತಮಿಳು ಭಾಷೆಯಲ್ಲಿ ಸಿದ್ಧವಾಗಿತ್ತು. ತಮ್ಮ ಚಿತ್ರಗಳ ಬಿಗ್ ಫ್ಯಾನ್ ರಾಮಚಂದ್ರನ್ ಒತ್ತಾಯದ ಮೇರೆಗೆ ಖುದ್ ವಿ.ಶೇಖರ್ ಕನ್ನಡಕ್ಕೆ ಬಂದು `ಹೆಂಡ್ತಿರ ದರ್ಬಾರ್ 'ಮಾಡಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು,ರಮೇಶ್ ಅರವಿಂದ್ ಅವರುಗಳ ಕಡೆಯಿಂದ ತಮ್ಮ ಕಲ್ಪನೆಯಲ್ಲಿ ಹೇಗಿದೆಯೋ..ಹಾಗೇನೆ ದರ್ಬಾರ್ ಸಿದ್ಧಗೊಳಸಿದ್ದಾರೆ.

ಬರುವ ಜುಲೈ 2 ರಂದು ಚಿತ್ರ ತೆರೆಗೂ ಬರಲಿದೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅಂತ ಈಗಲೇ ಹೇಳೊದು ಕಷ್ಟ. ಚಿತ್ರ ಬಂದ ಮೇಲೆ ಇದರ ಬಗ್ಗೆ ಒಂದು ವಿಮರ್ಶೆ ಮಾಡಬಹುದು. ಆದ್ರೆ, ಚಿತ್ರೀಕಣದ ಸಂದರ್ಭದಲ್ಲಿಯ ಕೆಲವು ಸನ್ನಿವೇಶಗಳನ್ನ ನಾಯಕ ರಮೇಶ್ ಅರವಿಂದ್ ಈಗ ಹಂಚಿಕೊಂಡಿದ್ದಾರೆ.ನಿರ್ದೇಶಕ ವಿ.ಶೇಖರ್ ರಮೇಶ್ ಅವರಿಗೆ ಹೆಂಡ್ತಿ ಥರವೇ ಕಾಡಿದ್ದಾರೆ. ಚಿತ್ರದ ವೇಳೆ ತಮಗೆ ಹೇಗೆ ಬೇಕೊ. ಹಾಗೆ ಸೀನ್ಸ್ ಬರದೇ ಹೋದ್ರೆ ಹೆಂಡ್ತೀರ ಥರ ಹಠ ಮಾಡ್ತಿದ್ದರಂತೆ.ಹಾಗೇನಾದ್ರೂ ಅದು ಅಸಾಧ್ಯವೆನಿಸಿದಾಗ ಹೆಂಡ್ತಿ ಮುದ್ದು ಮಾಡೋ ಹಾಗೆ ಮುದ್ದು ಮಾಡಿ..ಐಸ್ ಇಟ್ಟು ಕೆಲಸ ತೆಗೆತಿದ್ದರಂತೆ..

ಹೊಸ ಹುಡುಗಿ ಅಂಬಿಕಾ ಎಕ್ಸ್ ಪಿಯರೆನ್ಸ್ ಹೀಗೆಲ್ಲ ಇಲ್ಲ ಬಿಡಿ. ಹೆಚ್ಚು ಸಾಧು ಅವರೊಟ್ಟಿಗೇನೆ ಈ ರಂಗಭೂಮಿ ಕಲಾವಿದೆಯ ಸೀನ್ ಗಳಿವೆ,ಸಂಭಾಷಣೆಗಳಿವೆ. ಹಾಗಾಗಿ, ಈ ನಟಿಗೆ ಸಾಕಷ್ಟು ಹಾಸ್ಯಭರಿತ ಸನ್ನಿವೇಷಗಳು ಎದುರಾಗಿವೆ.ತೆರೆಯ ಹಿಂದಿನ ಶೂಟಿಂಗ್ ಅನುಭವದಲ್ಲಿ ಒಂದು ಸನ್ನಿವೇಷವನ್ನ ಹಂಚಿಕೊಂಡ್ರು. ಸಾಧು ಅವರಿಗೆ ಅಂಬಿಕಾ ಹೊಡೆಯುವ ಸೀನ್ ಅದು. ಡೈರೆಕ್ಟರ್ ಟೇಕ್ ಹೇಳೊದೇ ತಡ. ಅಂಬಿಕಾ ಹೊಡೆದದ್ದೇ ಹೊಡದದ್ದು. ಇದನ್ನ ನೋಡಿದವರೆಲ್ಲ ಸಖತ್ ಎಂಜಾಯ್ ಮಾಡಿದ್ರಂತೆ. ಸೀನ್ ಮುಗಿಯೋದೇ ತಡ. ನಿಜವಾಗಲೂ ಸೀನ್ ಸಖತ್ ಆಗಿತ್ತು ಅಂತ ಹೊಗಳಿದರಂತೆ..

ಆದ್ರೆ, ರಂಗಾಯಣ ರಘು ಆಗಲಿ, ಸಾಧು ಕೋಕಿಲ ಆಗಲಿ.ದರ್ಬಾರ್ ನ ದರ್ಬಾರ್ ಗಿರಿ ಹಂಚಿಕೊಳ್ಳು ಬಂದಿರಲಿಲ್ಲ. ಇದು ಸಿಗದೇ ಇದ್ದರೇ ಏನಾಯ್ತು.ಇವರ ಹಾಸ್ಯವನ್ನ ತೆರೆ ಮೇಲೆ ನೋಡಿಯೇ ಎಂಜಾಯ್ ಮಾಡೋಣ ಅಲ್ಲವೇ...

ರೇವನ್ ಪಿ.ಜೇವೂರ್

Tuesday, June 22, 2010

ಕಾಮಿಡಿ ಓದಿ ಮಜಾ ಮಾಡಿ...



ಮಜಾ ಮಾಡಿ...ಹೌದು...ಇಲ್ಲೊಂದು ಬ್ಲಾಗ್ ಇದೇ ರೀ..ತುಂಬಾ ಚೆನ್ನಾಗಿದೆ. ಯಾರದು..ಏನೂ..ಇದಂತು ಗೊತ್ತಿಲ್ಲ. ಬ್ಲಾಗ್ ನಲ್ಲೂ ಈ ವಿವರ ನನಗೆ ದೊರೆತ್ತಿಲ್ಲ. ಅದ್ರೆ, ಇಲ್ಲಿಯ ಬರಹಗಳು ರಾಜಕೀಯ ಆಗು-ಹೋಗುಗಳ ಮೇಲೆ ಇದು ಬೆಳಕು ಚೆಲ್ಲುತ್ತದೆ. ಪ್ರಚಲಿತ ವಿಷಯಗಳ ಮೇಲು ಕ್ಷಕಿರಣವಿದೆ. ಹಾಗಂತ ಇದು ಗಂಭೀರ ಬ್ಲಾಗ್ ಅಲ್ಲ. ಇಲ್ಲಿ ಹಾಸ್ಯಕ್ಕೆ ತುಂಬಾನೇ ಜಾಗವಿದೆ. ಜಾಗವೆಂದ್ರೆ ಇಡೀ ಬ್ಲಾಗ್ ನ ಬರಹವೆಲ್ಲ ಹಾಸ್ಯಮಯ....ಆನಂದಮಯ...

ಬ್ಲಾಗ್ ನ ಟೈಟಲ್ ನಲ್ಲಿಯೇ 'ಮಜವಿದೆ' ಇದರ ಮುಂದೆ ವಾಣಿ ಬೇರೆ. ಈ ಎರಡೂ ಪದಗಳ ಮಧ್ಯೆ ಅಗಸನ ಕತ್ತೆಯ ಚಿತ್ರ. ಕತ್ತೆ ಚಿತ್ರದ ಬ್ಲಾಗ್ ನಲ್ಲಿ ಸಾಕಷ್ಟು ಬರಹಗಳಿವೆ. ಸುಮಾರು 2005 ರಿಂದಲೇ ಇದು ಅಪ್ ಡೇಟ್ ಆಗಿದೆ. ಅದೆಷ್ಟು ಹ್ಯೂಮರಸ್ ಸಾಹಿತ್ಯವಿಲ್ಲಿದ ಅಂದ್ರೆ,ಹಾಸ್ಯಪ್ರೇಮಿಗಳಿಗೆ ಇದೊಂದು ಸುಂದರ ತಾಣವೇ ಬಿಡಿ.

ಇದನ್ನ ಸದಾ ಓದುತ್ತಿದ್ದ ನನ್ನ್ ಗೆಳೆಯ ಈ ಬ್ಲಾಗ್ ಬಗ್ಗೆ ನನಗೆ ಹೇಳಿದ.`ಮಜಾವಾಣಿ' ಯಂತ ಬ್ಲಾಗಿದೆ. ಅಗ ಇದು ದಿನವೂ ಇದು ಅಪಡೇಟ್ ಆಗ್ತಿತ್ತು. ಆದ್ರೆ, ಅದೇಕೋ ಇದಕ್ಕೆ ಬರೆಯುತ್ತಿದ್ದ ವ್ಯಕ್ತಿ ಬರೆಯುದನ್ನೇ ನಿಲ್ಲಿಸಿದ್ದಾರೆ.ಹಾಗೆ ಇದರಲ್ಲಿಯ ಕೊನೆಯ ಲೇಖನ ಆಗಷ್ಟ್ 9 2008 ಅಂತ ಇತಿಹಾಸ ಪುಟದ ಐತಿಹಾಸಿಕ ಎಂಡ್ ಹೇಳುತ್ತದೆ. ಆದ್ರೂ,ಇದರಲ್ಲಿಯ ಬರಹಗಳು ಓಲ್ಡ್ ಈಜ್ ಗೋಲ್ಡ್ ಅನ್ನೋ ಥರವೇ ಈಗಲೂ ಹಾಸ್ಯದ ಹೊನಲು ಹರಿಸುತ್ತವೆ.ಇಂತವುಗಳಲ್ಲಿ ನನ್ ಸ್ನೇಹಿತ ಓದಿದ ಕೆಲವು ಹ್ಯೂಮರಸ್ ಸಾಲುಗಳು ನಿಮಗಾಗಿ...

ಮಜಾವಾಣಿ ವರದಿಗಾರ ಮತ್ತು ಶ್ರೀ..ಶ್ರೀ ರವಿಶಂಕರ್ ನಡುವಿನ ಮಾತು-ಕಥೆ ಸಂದರ್ಭ..

ಮಜಾವಾಣಿ ವರದಿಗಾರ: ಶ್ರೀ ರವಿಶಂಕರ್ ಬಳಿ ಬಂದು. ನೀವು ಸಿತಾರ್ ನುಡಿಸುತ್ತಿದ್ದವರಲ್ಲವೇ...?

ಶ್ರೀ ರವಿಶಂಕರ್; ಇಲ್ಲಾ..ಇಲ್ಲಾ...ನಾನ್ ಸಿತಾರ್ ರವಿಶಂಕರ್ ಅಲ್ಲ. ಆರ್ಟ್ ಆಫ್ ಲಿವಿಂಗ್ ರವಿಶಂಕರ್.

ಮಜಾವಾಣಿ ವರದಿಗಾರ ಮತ್ತೊಂದು ಪ್ರಶ್ನೆ.

ಆರ್ಟ್ ಆಫ್ ಲಿವಿಂಗ್ ಅಂದ್ರೆ, ಬದುಕುವವರ ಕಲೇನಾ...

ಶ್ರೀ ರವಿಶಂಕರ್: ಇಲ್ಲಾ...ಇಲ್ಲಾ. ನಾನು ಬದುಕುವು ಹೇಗೆಂದು ಹೇಳಿಕೊಡ್ತಿನಿ...


ಮಜಾವಾಣಿ ಮತ್ತೊಂದು ಪ್ರಶ್ನೆ: ಸತ್ತವರಿಗೆ ಬದುಕುವ ಕಲೆ ಹೇಳಿಕೊಡಬಹುದುಲ್ಲವೆ...?

ಶ್ರಿ ರವಿಶಂಕರ್; ನಾನು ಬದುಕಿದವರಿಗೆ ಬದುಕುವ ಕಲೆ ಹೇಳಿ ಕೊಡ್ತಿನಿ...


ಹಾಸ್ಯಭರಿತ ಬರಹಗಳು ಇಲ್ಲಿ ಇನ್ನು ಅನೇಕ.ವರದಿ ರೂಪದಲ್ಲಿಯೇ ಇರುವ ಈ ಎಲ್ಲ ಹ್ಯೂಮರಸ್ ಸಾಲುಗಳು ಸಂಬಂಧಪಟ್ಟವರಿಗೆ ಚಾಟಿ ಪ್ರಯೋಗಿಸಿದಂತಿವೆ.ತಿದ್ದಿಕೊಳ್ಳಿ ನನ್ನ `ಬುದ್ದು' ಮಕ್ಕಳೆ ಅನ್ನೋ ಮಾತು ಇಲ್ಲಿ ಚುಚ್ಚಿ ಹೇಳುತ್ತವೆ.ಇಂತಹ ಉತ್ತಮ ಬ್ಲಾಗ್ ಗೆ ಆ ಬರಹಗಾರ ಕಳೆದ 2 ವರ್ಷದ ಹಿಂದೇನೆ ವಿದಾಯ ಹೇಳಿದ್ದಾರೆ. `ಮಜಾವಾಣಿ.ನೆಟ್' ಅನ್ನೊ ಮತ್ತೊಂದು ಹೊಸ ವಿಳಾಸವನ್ನ ಕೊಟ್ಟು ಹೋಗಿದ್ದಾರೆ.ಇಲ್ಲಿವರೆಗೂ ನಾನ್ ಹೇಳಿದ ವಿಷಯಗಳ ಬ್ಲಾಗ್ ನ ವಿಳಾಸ ಮಜಾವಾಣಿ ಡಾಟ್ ಬ್ಲಾಗ್ ಸ್ಪಾಟ್ ಡಾಟ್ ಕಾಮ್. ಇಲ್ಲಿಗೆ ಹೋದ್ರೆ ಸಾಕು. ಹಳೆ ಉಪ್ಪಿನಕಾಯಿ ಥರದ ಟೇಸ್ಟಿ ಹಾಸ್ಯ ಬರಹಗಳಿವೆ.ಓದಿ ಎಂಜಾಯ್ ಮಾಡಿ. ನಾನಂತು ದಿನವೂ ಒಂದೊಂದಾಗಿ ಓದುತ್ತಿದ್ದೇನೆ...


ರೇವನ್ ಪಿ.ಜೇವೂರ್

Monday, June 21, 2010

ನಾನು ನನ್ನ ಕನಸು...


ನಾನು ನನ್ನ ಕನಸು ಚೆನ್ನಾಗಿದೆ. ಕನ್ನಡ ಚಿತ್ರರಂಗದ ಸದ್ಯದ ದಿನಗಳಲ್ಲಿ ಇದೊಂದು ಹೃದಯ ಸ್ಪರ್ಶಿ ಚಿತ್ರ. ತಾಯಿ-ಮಗನ ಚಿತ್ರಗಳು ಈ ಹಿಂದೆ ಬಂದು ಹೋಗಿವೆ. ಆದರೆ, ಇಲ್ಲಿ ತಂದೆ-ಮಗಳ ನಡುವಿನ ಪ್ರೀತಿನೇಯಲ್ಲ. ಇಲ್ಲಿ ಬರುವ ಕಥೆಯಲ್ಲಿ ಹಲವು ಪಾತ್ರಗಳು ಬಂದು ಹೋಗುತ್ತವೆ. ಆದ್ರೂ, ಇಲ್ಲಿ ತಂದೆಯ ಪ್ರೀತಿನೇ ಬಹುಮುಖ್ಯವಾದ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಮಗನಿಗೆ ತಾಯಿಯ ಕಡೆಗೆ ಒಲವು ಜಾಸ್ತಿ. ತಂದೆಗೆ ಹೆಣ್ಣುಮಗಳ ಮೇಲೆ ಅತೀವವಾದ ಪ್ರೀತಿ. ಇದನ್ನೇ ಪ್ರಮುಖ ಎಳೆಯನ್ನಾಗಿಟ್ಟುಕೊಂಡು ನಟ-ನಿರ್ಮಾಪಕ ಪ್ರಕಾಶ್ ರೈ ಈ ಚಿತ್ರವನ್ನ ಕನ್ನಡಿಗರಿಗೆ ಕೊಟ್ಟಿದ್ದಾರೆ...

ಆದ್ರೆ, ಈ ಮೊದಲು ಇದೇ ಕಥೆನೇ `ಅಭಿಯುಂ ನಾನುಂ'ಎಂಬ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ತೆರೆ ಕಂಡಿದೆ.ಪ್ರಕಾಶ್ ರೈ ಇಲ್ಲೂ ಅದೇ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಆದರೆ, ಕನ್ನಡದ ವಿಷಯಕ್ಕೆ ಬಂದಾಗ ಸ್ವತ: ಪ್ರಕಾಶ್ ರೈ ನಿರ್ದೇಶನ ಮಾಡಿದ್ದಾರೆ.ಸಂಭಾಷಣೆಯನ್ನೂ ತಾವೇ ಬರೆದಿದ್ದಾರೆ.

ಇಷ್ಟೊಂದು ಅಂಶದ ಚಿತ್ರದಲ್ಲಿ `ಕನಸು' ಪ್ರಕಾಶ್ ರೈ ಅವರ ಒಬ್ಬಳೇ ಮಗಳು. ಇವಳು ಹುಟ್ಟಿದಾಗ ಅಪ್ಪ ಉತ್ತಪ್ಪನಿಗೆ ಎಲ್ಲಿಲ್ಲದ ಸಡಗರ...ಸಂಭ್ರಮ. ತಾಯಿಗಿಂತಲೂ ಹೆಚ್ಚಿನ ಪ್ರೀತಿ ತೋರುವ ಅಪ್ಪ..ಮುದ್ದಿನ ಮಗಳು ಏನೇ ಕೇಳಲಿ ಇಲ್ಲವೇ ಇಲ್ಲ ಅನ್ನುವ ತಂದೆ.
ದಿನಗಳು ಉರುಳಿದಂತೆ..ಕ್ಷಣಗಳು ಮಧುರವಾದಂತೆ ಈ ಅಪ್ಪನ ಪ್ರೀತಿ ಕಡಿಮೆ ಆಗೋದೆಯಿಲ್ಲ. ಆದ್ರೂ, ಅತೀಯಾದ್ರೆ ಎಲ್ಲವೂ ಕಷ್ಟ ಅನ್ನೋ ಮಾತಿದೆಯಲ್ಲ. ಇದು ಇಲ್ಲೂ ನಿಜವಾಗುತ್ತದೆ. ಪ್ರೀತಿಯ ಮಗಳು ಬೆಳದಂತೆಲ್ಲ ಒಂದೊಂದೆ ಶಾಕ್ ಕೊಡ್ತಾಳೆ...

ಇಂತಹ ಅನಿರೀಕ್ಷಿತ ಬದಲಾವಣೆಗಳು ಮುಂದೆ ಅಪ್ಪನಿಗೆ ಕಷ್ಟವಾಗ್ತವೆ. ಮಗಳು ದೂರವಾದರೆ, ಎಷ್ಟು ಕಷ್ಟ.ಪ್ರೀತಿಯ ಅಪ್ಪನಿಗೆ ಇನ್ನಿಲ್ಲದ ಆಘಾತಗಳು. ಇವುಗಳನ್ನ ಪ್ರಕಾಶ್ ರೈ ತುಂಬಾನೇ ಚೆನ್ನಾಗಿ ತೋರಿದ್ದಾರೆ.ನಟ ಅಚ್ಚುತ್ ರಾವ್ ನಿಭಾಯಿಸಿದ ಬ್ರಿಜೇಷ್ ಪಟೇಲ್ ಕ್ಯಾರೆಕ್ಟರ್ ಇಲ್ಲಿ ಆಗಾಗ ನಗೆಯ ಹೊನಲು ಹರಿಸುತ್ತದೆ.ಸಿಹಿಕಹಿ ಚಂದ್ರು ಅವರ ಪಾತ್ರವೂ ಇದೇ ಕೆಲಸವನ್ನ ಮಾಡ್ತದೆ. ಇದಕ್ಕೆ ಸಮ್ ಎಕ್ಸಾಂಪಲ್ ಕೆಳಗಿವೆ ನೋಡಿ...

ನಟ ರಮೇಶ್- ಪ್ರಕಾಶ್ ನಡುವಿನ ಸಂಭಾಷಣೆ ವೇಳೆ..

ಸಿಹಿಕಹಿ ಚಂದ್ರು: ಉತ್ತಪ್ಪ ನಿಮ್ಮ ಸ್ನೇಹಿತರಾ..?

ಪ್ರಕಾಶ್ ರೈ: ಇಲ್ಲಾ..ನನ್ನ ಕೊಲೆ ಮಾಡೋದಕ್ಕೆ ಬಂದಿದ್ದಾರೆ. ರೇಟ್ ಮಾತಾಡ್ತಾಯಿದ್ದಿನಿ...

ಇಂತಹ ಹಲವು ಸನ್ನಿವೇಷಗಳಿವೆ. ಚಿತ್ರದಲ್ಲಿಯ ಈ ದೃಶ್ಯಗಳು ತುಂಬಾನೇ ಖುಷಿಕೊಡ್ತವೆ. ಅಪ್ಪ-ಮಗಳ ಮಮತೆಯ ನಡುವೇ ಒಂಚೂರು ಉಪ್ಪಿನ ಕಾಯಿ ಥರ ಟೇಸ್ಟಿ..ಟೇಸ್ಟಿ. ಚಿತ್ರದಲ್ಲಿಯ ಹಾಡುಗಳು ಕೂಡ ಇದೇ ಕೆಲಸವನ್ನ ಮಾಡ್ತವೆ. ಹಂಸಲೇಖ ಅವರ ರುಚಿಕಟ್ಟಾದ ಸಾಹಿತ್ಯ, ತಣ್ಣನೆಯ ಮಾಧುರ್ಯತೆಯ ಅನುಭವ ನೀಡುವ ಸಂಗೀತ ಎದೆ ತಟ್ಟುತ್ತವೆ. ಅಪ್ಪಂದಿರಲ್ಲಿ ಅಡಗಿದ ಪ್ರೀತಿಯನ್ನ ಹೊರಗೆಡುವುಂತೆ ಮಾಡ್ತವೆ..

ಆದರೆ, ಇಷ್ಟೆಲ್ಲ ಇರುವ ಚಿತ್ರಕ್ಕೆ ಮೊದಲ ದಿನ ಉತ್ತಮ ರೆಸ್ಪಾನ್ಸ್ ಬಂತು. ಈಗಲೂ ಅದೇ ಅಭಿಪ್ರಾಯವಿದೆ. ಆದ್ರೂ, ಥೀಯಟರ್ ಗೆ ಬರುವ ಜನ ಕಡಿಮೇನೆ ಅನಿಸುತ್ತದೆ. ಒಂದು ಸಂಡೆ ನಾನು ನನ್ನ ಹುಡುಗಿ ಚಿತ್ರ ನೋಡಲು ಹೋಗಿದ್ದೇವು. ಬೆಂಗಳೂರಿನ `ಭೂಮಿಕಾ' ಥೀಯಟರ್ ನಲ್ಲಿ ಈ ಚಿತ್ರ ನೋಡಿ ತುಂಬಾನೇ ಖುಷಿಪಟ್ಟೆವು.ಎಲ್ಲ ಅಪ್ಪಂದಿರುಗಳಿಗೆ ಹೇಳಿ ಮಾಡಿಸಿದಂತಹ ಚಿತ್ರವಿದು.

- ರೇವನ್ ಪಿ.ಜೇವೂರ್

Friday, June 18, 2010

ಸಪೋಟಾ ತೋಟ..ಕಾರ್ತಿಕನ ಆಟ...


ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಸಪೋಟಾ ತೋಟವಿದೆ. ಇಂತಹದೊಂದು ಕಲ್ಪನೆನೂ ಇರಲಿಲ್ಲ. ಮೊನ್ನೆಯಷ್ಟೆ ಅಲ್ಲಿಗೆ ಹೋದಾಗ ತೋಟದ ಆ ಒಂದು ಸೌಂದರ್ಯ ಮನದಲ್ಲಿ ಜಾಗ ಮಾಡಿತು.`ಕಾರ್ತಿಕ್' ಅನ್ನೊ ಹೊಸಬನ ಚಿತ್ರದ ಶೂಟಿಂಗ್ ಇಲ್ಲಿ ನಡೆಯುತಿತ್ತು. ಕಾಡೊಂದರ ಅನುಭವ ನೀಡುವ ಈ ಸ್ಥಳದಲ್ಲಿ ಮುಂಬೈನ ಚಿತ್ರ ತಂಡ ಆಗಮಿಸಿತ್ತು.ಕೆಲವರನ್ನ ಬಿಟ್ರೆ, ಇಲ್ಲಿಯ ಫಿಲ್ಮ ಟೀಮ್ ಬಹುತೇಕ ಮರಾಠಿ ಚಿತ್ರರಂಗದಲ್ಲಿಯೇ ದುಡಿಯುತ್ತಿದೆ.ವಿಶೇಷವೆಂದರೆ, ದೂರದ ಮಹಾರಾಷ್ಟದಿಂದ ಬಂದವರಿಗೆ ಉತ್ತಮವಾದ ಕನ್ನಡ ಚಿತ್ರಕೊಡಲೇಬೇಕೆಂದು ಎಲ್ಲರೂ ಇಲ್ಲಿ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದರು.

ಇದೇನೋ ಸರಿ, ಆದ್ರೆ, ಇಲ್ಲಿ ಇನ್ನು ವಿಶೇಷತೆಗಳಿದ್ದವು. ಚಿತ್ರದ ನಾಯಕ ಕರ್ನಾಟಕದವರು.ಮೂಲ ಹೆಸರು ಪ್ರಜ್ವಲ್ ಶೆಟ್ಟಿ.ಕಾರ್ತಿಕ್ ಶೆಟ್ಟಿ ಈ ನಟನಿಗೆ ಚಿತ್ರರಂಗ ಕೊಟ್ಟ ಹೆಸರು. 'ಯುವಾ' ಚಿತ್ರವೇ ಈ ಕಲಾವಿದನಿಗೆ ಸ್ಯಾಂಡಲ್ ವುಡ್ ಬರಲು ದಾರಿ ಮಾಡಿಕೊಟ್ಟತು. ಇದು ಬರದೆ ಇದ್ದರೆ ಬಹುಶ: ಕಾರ್ತಿಕ್ ಮುಂಬೈನಗರದಲ್ಲಿ ಉಳಿದು ಬಿಡುತ್ತಿದ್ದರು.ತಂದೆ ವಿಜಯ್ ಶೆಟ್ಟಿಯ ಸ್ನೇಹಿತ..ಮಹೇಶ್ ಮಾಂಜ್ರೇಕರ್ ಜೊತೆಗೆ ಸಹಾಯಕ ನಿರ್ದೇಶಕರಾಗಿಯುಳಿಯುತ್ತಿದರೋ ಏನೋ.ಮಂಗಳೂರಿನ ನಂಟು, ಚಿತ್ರರಂಗದಲ್ಲಿ ಮಿಂಚಬೇಕೆಂಬ ಹಂಬಲ. ಎರಡೂ ಪ್ರಜ್ವಲ್ ಶೆಟ್ಟೆಯೆಂಬ ಯುವಕನನ್ನ ಇಲ್ಲಿಗೆ ತಂದಿವೆ...

ಕಾರ್ತಿಕ್ ಅಂತ ಬರಲಿರುವ ಚಿತ್ರದಲ್ಲಿ ನಾಯಕ ಪ್ರಜ್ವಲ್ ಸಮರ ಕಲೆಯನ್ನ ಪ್ರಯೋಗಿಸಿದ್ದಾರೆ. ಪ್ರೀತಿ-ಪ್ರೇಮದ ಎಳೆ ಇರೋ ಚಿತ್ರದಲ್ಲಿ ಸಾಹಸಕ್ಕೆ ವಿಶೇಷ ಸ್ಥಾನ-ಮಾನವಿದೆ.ರಿಯಲ್ ಸ್ಟಂಟ್ಸ್ ಗಳ ಸಾಹಸವೂ ಇದೆ.ಹಾಗಾಗಿ, ನಾಯಕ ಪ್ರಜ್ವಲ್ ಡ್ಯೂಪ್ ಇಲ್ಲದೇನೆ ಇಲ್ಲಿ ಹಲವು ಆರ್ಕಷಕ ಸ್ಟಂಟ್ಸ್ ಮಾಡಿದ್ದಾರೆ.ಎದೆವರೆಗೂ ಮೇಲಕ್ಕೆ ಹಾರಿ ಖಳನಾಯಕರನ್ನ ಹೊಡೆದು ಹಾಕುವ ದೃಶ್ಯಗಳನಂತು ಕಾರ್ತಿಕ್ ತುಂಬಾ ಚೆನ್ನಾಗಿ ಮಾಡಿದ್ದಾರೆ.ಜಂಪಿಂಗ್, ಫಯರ್ ಸ್ಟಂಟ್ಸ್ ಗಳಲ್ಲೂ ಇದೇ ಧೈರ್ಯ..

`ಯುವಾ'ಚಿತ್ರದಲ್ಲಿ ಕಾರ್ತಿಕ್ ಒಬ್ಬ ವೃತ್ತಿಪರ ಸಮರ ಕಲಾವಿದನ (ಮಾರ್ಷಲ್ ಆರ್ಟ್)ಪಾತ್ರ ನಿರ್ವಹಿಸಿದ್ದರು.ಅದಕ್ಕೇನೆ ಯುವಾ ಚಿತ್ರದಲ್ಲಿ ರೋಮಾಂಚನಗೊಳ್ಳುವಂತಹ ಫೈಟಿಂಗ್ ಗಳಿದ್ದವು. ಆದ್ರೆ, ಇದೇ ನಟ `ಕಾರ್ತಿಕ್'ಚಿತ್ರಕ್ಕಾಗಿ ವಿಶೇಷ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಸಿಂಗಪೂರ್ ನಲ್ಲಿ ಬರೊಬ್ಬರಿ 4 ತಿಂಗಳವರೆಗೂ ವಿವಿಧ ಸಮರ ಕಲೆಯ ಅಭ್ಯಾಸ ಮಾಡಿಬಂದಿದ್ದಾರೆ. `ಮಿಕ್ಸ್ಡ್ ಮಾರ್ಷಲ್ ಆರ್ಟ್' ಅಂತ ಕರೆಯಲ್ಪಡುವ ಈ ಕಲೆಯಲ್ಲಿ ಎದುರಾಳಿಯನ್ನ ಬಡೆದು ಹಾಕುವ ಸಾಕಷ್ಟು ಯುದ್ಧ ಕಲೆಯಗಳಿವೆ..

ವಿಶಿಷ್ಟ ತಾಲೀಮಿನ ಈ ನಾಯಕ ಎಲ್ಲವನ್ನ ಅಲ್ಲದೇ ಇದ್ದರೂ ತಕ್ಕಮಟ್ಟಿಗೆ ಕಾರ್ತಿಕ್ ಚಿತ್ರದ ಸಾಹಸಗಳಲ್ಲಿ ಇವುಗಳನ್ನ ಬಳಸಿದ್ದಾರೆ. `ನಂಜುಂಡಿ ಕಲ್ಯಾಣಿ' ಚಿತ್ರಕ್ಕೆ ಸಾಹಸ ಮಾಡುತ್ತಿದ್ದ ಸ್ಟಂಟ್ಸ್ ಮಾಸ್ಟರ್ ನಂಜುಂಡಿ ನಾಗರಾಜ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಹಳೇ ಬೇರು..ಹೊಸ ಚಿಗುರು ಅನ್ನೋ ಥರವೇ ಕಾರ್ತಿಕ್ ನ ಉತ್ಸಾಹಕ್ಕೆ ಹಿರಿಯ ಸಾಹಸಿಗ ನಾಗರಾಜ್ ಸಾಕಷ್ಟು ಸಂತಸಗೊಂಡಿದ್ದರು. ತಮ್ಮ ಕಲ್ಪನೆಯ ಸಂಯೋಜನೆಯಲ್ಲಿ ಬರುವ ಆ ಎಲ್ಲ ಸಾಹಸಗಳನ್ನ ಕಾರ್ತಿಕ್ ನಿಂದ ಮಾಡಿಸಿದ್ದಾರೆ.

ಸಾಹಸದ ದೃಷ್ಟಿಯಿಂದ ಕಾರ್ತಿಕ್ ಚಿತ್ರ ಹೆಚ್ಚು ಗಮನ ಸೆಳೆಯಬಹುದು. ಕಥೆ ಏನ್ ಆಗ್ತದೆ ಅಂತ ಸದ್ಯಕಂತು ಹೇಳೋದಕ್ಕೆ ಆಗುವುದಿಲ್ಲ.ಸತೀಶ್ ಶೆಟ್ಟಿಯವರ ನಿರ್ದೇಶನಕ್ಕೆ ಕನ್ನಡಿಗರು ಅದೆಷ್ಟು ಪ್ರಶಂಸೆ ವ್ಯಕ್ತಪಡಿಸುತ್ತಾರೋ..ಕನ್ನಡದ ನಟ ಅವಿನಾಶ್, ಸುಧಾ ಬೆಳವಾಡಿ ಕಾರ್ತಿಕ್ ನಲ್ಲಿ ಕಾಣಿಸಿಕೊಳ್ತಾಯಿದ್ದಾರೆ.ಮುಂಬೈ ಬೆಡಗಿ..ಸರ್ಕಸ್ ಚತ್ರದ ಚೆಲುವೆ ಅರ್ಚನಾ ಗುಪ್ತಾ ಇಲ್ಲಿ ಲೀಡ್ ರೋಲ್ ನಲ್ಲಿದ್ದಾರೆ.ಮೊದಲೇ ಹೇಳಿದಂತೆ ಕೊಂಚ ಸ್ಟಂಟ್ಸ್ ಗಳನ್ನೂ ಮಾಡಿದ್ದಾರೆ. ಇವರೆಲ್ಲರ ಸಾಹಸಮಯ ಚಿತ್ರ ತೆರೆಗೆ ಬರಲು ಇನ್ನು ಬಹಳಷ್ಟು ದಿನಗಳು ಬೇಕು..ಈಗಷ್ಟೇ ಚಿತ್ರ ತಂಡ ಶೂಟಿಂಗ್ ಕಂಪ್ಲೀಟ್ ಮಾಡಿದೆ...

ರೇವನ್ ಪಿ.ಜೇವೂರ್

Wednesday, June 16, 2010

`ಟ್ಯಾಂಗಲ್ಡ್ ' ಎಂಬ ಸುಂದರ ಸಿನೆಮಾ


ಚಿತ್ರ ಜಗತ್ತಿನ ಕ್ಯಾನ್ ವಾಸ್ ತುಂಬಾ ಸುಂದರ.ಬೆಳ್ಳನೆಯ ಬೆಳ್ಳಿ ಪರದೆ ಮೇಲೆ ಚಿತ್ರ ರಾರಾಜಿ ಗೆದ್ದಾಗ ಇನ್ನು ಚೆಂದ. ಆದ್ರೆ,ಚಿತ್ರವನ್ನ ಚಿತ್ರಕಲಾವಿದನ ಚಿತ್ರದಂತೆ ಇನ್ನು ಯಾರು ತೆರೆ ಮೇಲೆ ತಂದಂತಿಲ್ಲ. ಇಲ್ಲವೇ ಅಂತಹ ಪ್ರಯೋಗಗಳು ಈ ಹಿಂದೆ ಆಗಿವೆಯೋ ಏನೋ.ಅಷ್ಟೊಂದು ಹಿಂದಕ್ಕೆ ವಿಚಾರವಂತು ಮಾಡಿಲ್ಲ. ಇತ್ತೀಚಿಗೆ ಒಂದು ಇಂಗ್ಲೀಷ್ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಂಡೆ. ರೆಪುಂಜಲ್ ಅನ್ನೊದು ಈ ಚಿತ್ರಕ್ಕೆ ಇಟ್ಟ ಮೊದಲ ಹೆಸರು.ಈಗ ಇದು ಟ್ಯಾಂಗಲ್ಡ್ ಅಂತಲೆ ಪ್ರಮೊಟ್ ಆಗ್ತಾಯಿದೆ...

ಈ ಒಂದು ಚಿತ್ರದಲ್ಲಿ ಹಲುವ ವಿಶೇಷತೆಗಳಿವೆ. ಅವುಗಳಲ್ಲಿ ಮೊದಲು ಕಂಡುಬರುವುದೇ ಇದಕ್ಕೆ ನೀಡಲಾದ ಎಫೆಕ್ಟ್. ಥ್ರೀಡಿ ಅನಿಮೇಷನ್ ನಲ್ಲಿ ಸಿದ್ಧವಾಗಿರುವ ಈ ಸಿನೆಮಾಕ್ಕೆ ಪೇಂಟಿಂಗ್ ಸ್ಪರ್ಶ ನೀಡಲಾಗಿದೆ.ಬೆಳ್ಳಿಪರದೆ ಮೇಲೆ ಬರಲಿರುವ ಚಿತ್ರದ ಎಲ್ಲ ಪಾತ್ರಗಳು ಚಿತ್ರಕಲಾವಿದನ ಒಂದು ಸುಂದರ ಕಲ್ಪನೆನೆ ಅನಿಸಿಬಿಡುತ್ತವೆ. ರಾಣಿ ರೆಪುಂಜಲ್ ಪಾತ್ರ ಇಲ್ಲಿ ನಿಜಕ್ಕೂ ಅತೀ ಸುಂದರ.ನಾಯಕನ ಪಾತ್ರಧಾರಿಯೂ ಅಷ್ಟೆ. ಕಲಾವಿದನ ಅದ್ಭುತ ಕಲಾಕೃತಿನೇ ಸರಿ..

ಇಷ್ಟೊಂದು ಚೆಂದ ಚಿತ್ರದ ಬಗ್ಗೆ ವಿಕಿಪೀಡಿಯಾದಲ್ಲಿ ಮಾಹಿತಿ ದೊರೆಯುತ್ತದೆ. ಯುಟ್ಯೂಬ್ ನಲ್ಲೂ ಚಿತ್ರದ ಟ್ರೈಲರ್ ಲಭ್ಯವಿದೆ. ಹಾಗೆ ಸಿಗೋ ಅನಿಮೇಷನ್ ಚಿತ್ರ ಈಗಲೇ ಏನೂ ತೆರೆಗೆ ಬರುತ್ತಿಲ್ಲ. ಬರುವ ನವೆಂಬರ್ 24 ರಂದು ಬಿಡುಗಡೆಯಾಗ್ತಾಯಿದೆ.ನಥಾನ್ ಗ್ರೇನೋ ಅನ್ನೊರು ಟ್ಯಾಂಗಲ್ಡ್ ಗೆ ಪ್ಲೆಸೆಂಟ್ ಅನಿಸೋ ರೂಪಕೊಟ್ಟಿದ್ದಾರೆ. ಚಿತ್ರದ ವಿಷ್ಯುಲ್ ಕ್ವಾಲಿಟಿ ಯು ಫ್ರೆಂಚ್ ಚಿತ್ರ ಕಲಾವಿದ ಜಿನ್ ಹೊನೋರ್ ಫ್ರಾಗನಾರ್ಡ್ ಬರೆದ ಫೇಮಸ್ `ದಿ ಸ್ವಿಂಗ್' ಪೇಂಟಿಂಗ್ ಹೋಲುತ್ತದೆ.

ಆದ್ರೆ, ಈ ಚಿತ್ರ ಬಗ್ಗೆ ಇಲ್ಲೇನೆಕ್ಕೆ ಪಸ್ತಾಪ ಅಂತ ನಿಮಗನಿಸಬಹುದು. ಇದಕ್ಕೆ ಕಾರಣ ಚಿತ್ರದ ವಿಷ್ಯುಲ್ ರಿಚ್ ನೆಸ್.ಚಿತ್ರ ಕಲಾವಿದನ ಕಲ್ಪನೆಯಲ್ಲಿ ಅರಳಿದ ಚಿತ್ರದಂತಿರುವ ಈ ಸಿನೆಮಾದ ದೃಶ್ಯಗಳು ತುಂಬಾ ಇಷ್ಟವಾದವು. ಅದಕ್ಕೇನೆ ಇಲ್ಲಿ ಬರೆದದ್ದು. ಈ ಚಿತ್ರ ಬಂದ ಮೇಲೆ ನೋಡ್ತಿನೋ ಇಲ್ವೋ. ಸದ್ಯಕಂತು ಟ್ಯಾಂಗಲ್ಡ್ ಕ್ಯಾರೆಕ್ಟರ್ ಗಳು ಸುಂದರ ಅನುಭವ ನೀಡ್ತಾಯಿವೆ...

ರೇವನ್ ಪಿ.ಜೇವೂರ್

Tuesday, June 15, 2010

ಹೇಳದೆ ಕಾರಣ ಹೋದೆಯಾ...


ಮತ್ತೆ ಮುಂಗಾರು...ಕನ್ನಡದ ಹೊಸಬರ ಚಿತ್ರವಿದು. ಮುಂಗಾರು ಮಳೆಯಂತಹ ಚಿತ್ರಕೊಟ್ಟ ಅದೇ ಇ.ಕೃಷ್ಣಪ್ಪ ಕನ್ನಡಿಗರಿಗೆ ಮುಂಗಾರು ಮಳೆಯ ಸಿಂಚನ ಕೊಡಲಿದ್ದಾರೆ. ಆದ್ರೆ, ಈ ಚಿತ್ರದಲ್ಲಿಯ ಮಳೆ ಎಲ್ಲಿ ಬೇಕೊ ಅಲ್ಲಿ ಮಾತ್ರವಿರುತ್ತದೆ.ಆರಂಭದಿಂದ ಹಿಡಿದು ಅಂತ್ಯದವರೆಗೂ ಮಳೆಯ ತಣ್ಣನೆಯ ಅನುಭವ ಆಗ್ತಾನೆ ಇರುತ್ತದೆ. ಆದ್ರೂ, ಮಳೆ ಸಬ್ಜೆಕ್ಟ್ನ ಈ ಚಿತ್ರದಲ್ಲಿ ಕೆಲವು ಗಂಭರವ ವಿಷಯಗಳೂ ಇವೆ.ಅವುಗಳೇನು ಅನ್ನೊದು ಇನ್ನಷ್ಟೆ ಗೊತ್ತಾಗಬೇಕಿದೆ.

ವಿಷಯ ಸದ್ಯ ಇದಲ್ಲ.ಚಿತ್ರದ ಹಾಡಿನದು.ಸುಮಾರು ಆರು ಹಾಡುಗಳ ಮತ್ತೆ ಮುಂಗಾರು ಚಿತ್ರದಲ್ಲಿ ಒಂದು ಪ್ಯಾತೋ ಸಾಂಗ್ ಇದೆ. ಹಿಂದಿಯ ಗಾಯಕಿ ಆಶಾ ಭೋಸ್ಲೆ ಇದಕ್ಕೆ ಧ್ವನಿಯಾಗಿದ್ದಾರೆ. ಕನ್ನಡವೇ ಬರದಿರುವ ಆಶಾ ದ್ವಾರ್ಕಿ ರಾಘವ್ ಬರೆದ ಹಾಡಿಗೆ ಭಾವ ತುಂಬಿದ್ದಾರೆ. ಮಳೆಯ ಜೊತೆ..ಜೊತೆಗೆ ಈ ಹಾಡು ಮನದಲ್ಲಿ ವಿರಹದ ನೋವು ಬಿಡುತ್ತದೆ.ಮಳೆ ಬಂದು ಹೋದ ಮೇಲೂ ಹಾಡು ಆಗಾಗ ಕಾಡುವಂತಿದೆ. ಹೀಗಂತ ಚಿತ್ರ ತಂಡವೇ ಸಿದ್ಧಗೊಳಿಸಿದ 20 ನಿಮಿಷದ ಪ್ರಮೋಷ್ ನಲ್ಲಿ ದೃಶ್ಯಗಳು ಮತ್ತೆ ಮುಂಗಾರು ಚಿತ್ರದ ಪುಟ್ಟ ಸೆಳೆತವನ್ನ ಕಟ್ಟಿಕೊಡುತ್ತವೆ.ಇಲ್ಲಿ ತೋರಿದ ಆಶಾ ಹಾಡು ಮತ್ತೆ..ಮತ್ತೆ ಕಾಡುತ್ತದೆ ಬಿಟ್ಟು ಹೋದ ಕಾರಣವ ಕೇಳುತ್ತದೆ...

ಹೇಳದೆ ಕಾರಣ ಹೋದೆಯಾ...ಬಹು ದೂರ....


ಈ ರೀತಿಯ ಪಲ್ಲವಿಯ ಹಾಡು ರವಿಬೆಳೆಗೆರೆ ಬರೆದ "ಹೇಳಿ ಹೋಗು ಕಾರಣ' ಕಾದಂಬರಿಯನ್ನ ನೆನಪಿಸುತ್ತದೆ. ಬಿ.ಆರ್.ಲಕ್ಷ್ಮಣ ರಾವ್ ರಚಿಸಿದ ಹೇಳಿ ಹೋಗು ಕಾರಣ ಕವಿತೆಯನ್ನ ನೆನಪಿಸುತ್ತದೆ.ಇದೇ ಗೀತೆಗೆನೇ ಸಂಗೀತ ನೀಡಿ ತಾವೇ ಹಾಡಿದ್ದ ಸಿ.ಅಶ್ವಥ್ ಅವರ ಧ್ವನಿಯೂ ಕಿವಿಯಲ್ಲಿ ಗುಂಗುಟ್ಟುತ್ತದೆ..

ಹೇಳಿ ಹೋಗು ಕಾರಣ ಹೋಗುವಾ ಮೊದಲು
ನನ್ನ ಬಾಳಿನಿಂದ ದೂರವಾಗುವ ಮೊದಲು..

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ..

ಇನ್ನಷ್ಟು ಸಾಲುಗಳು ಈ ರಚನೆಯಲ್ಲಿವೆ. ಆದ್ರೆ, ಡೈರೆಕ್ಟರ್ ರಾಘವ್ ಮೊದಲ ಸಾಲಿಗೆ ಯಾರ ಬರಹ ಪ್ರೇರಣೆಯಾಗಿದೆಯೋ.ಇದಂತು ಗೊತ್ತಿಲ್ಲ. ಮತ್ತೆ ಮುಂಗಾರು ಚಿತ್ರದ ಗೀತೆಗಳು ಬಹುತೇಕ ಕೇಳುವಂತಿವೆ.ಚಿತ್ರದ ಆಡಿಯೋಗಳು ಇನ್ನು ರಿಲೀಜ್ ಆಗಿಲ್ಲ. ಆದರೆ,ಈಗಾಗಲೇ ನಮಗೆ ತೋರಿದ ಹಾಡಿನ ತುಣುಕುಗಳ ಆಧಾರಿಸಿ ಚೆನ್ನಾಗಿವೆ ಹಾಡುಗಳು ಅಂತ ಹೇಳಬಹುದು. ಕೇವಲ ಆಶಾ ಬೋಂಸ್ಲೆ ಅಲ್ಲ, ಹರಿಹರನ್, ಶ್ರೇಯಾ ಘೋಷಾಲ್, ಕನ್ನಡದ ವಿಜಯ್ ಪ್ರಕಾಶ್ ಸಹ ಮತ್ತೆ ಮುಂಗಾರು ಚಿತ್ರದಲ್ಲಿ ಗೀತೆಗೆ ಧ್ವನಿಯಾಗಿದ್ದಾರೆ. ಇವುಗಳಲ್ಲಿ ಡಾಕ್ಟರ್ ನಾಗೇಂದ್ರ ಪ್ರಸಾದ್ ಬರೆದ ಗೀತೆ ತುಂಬಾನೆ ಚೆನ್ನಾಗಿದೆ.ಬದಲಾಯಿತು..ಬದಲಾಯಿತು ಅಂತ ಆರಂಭವಾಗುವ ಈ ಗೀತೆ ಹರಿಹನ್ ಕಂಠದಲ್ಲಿ ಕೇಳುಗರ ಮೂಡ ನಿಜಕ್ಕೂ ಬದಲಿಸುತ್ತದೆ.

ಹೇಳದೆ ಕಾರಣ ಹೋಗುವ ಹಾಡುಗಳ ಸೆಳೆತ ಒಂದು ಮತ್ತೊಂದು ಗೀತೆ ಬರುವವರೆಗೆ ಇರುತ್ತದೆ. ಇನ್ನಾವುದೋ ಹಾಡು ಎದೆ ತಾಕಿದಾಗ ಹಳೆ ನೆನಪು ತಾಜಾ ಆಗುತ್ತವೆ.


ರೇವನ್ ಪಿ.ಜೇವೂರ್

Monday, June 14, 2010

ಮುಂಗಾರು ಮಳೆ ಭಟ್ಟರ ಹಾಡಿನ ಗುಂಗು



ಮುಂಗಾರು ಮಳೆಗೆ ಹೊಸ ರೂಪಕೊಟ್ಟ ಯೋಗರಾಜ್ ಭಟ್ಟರಿಗೆ ಹಾಡಿನ ಗುಂಗು ಜಾಸ್ತಿಯಿದೆ.ಕನ್ನಡ ಚಿತ್ರಗೀತೆಗಳು ಬರೆಯುವುದು ಗೊತ್ತೆಯಿದೆ. ಆದ್ರೆ, ಹಿಂದಿ ಚಿತ್ರದ ಆ ಸೆಳತೆ ತುಂಬಾನೆ ಇದೆ. ಗುಲ್ಜಾರ್ ಅವರ ಗೀತೆಗೆ ಇವರು ತಮ್ಮದೇ ಶೈಲಿಯ ಟಚ್ ಕೊಟ್ಟಿದ್ದಾರೆ. ನಾಸೀರುದ್ದೀನ್ ಷಾ, ವಿದ್ಯಾಬಾಲನ್, ಅರ್ಷದ್ ಅಭಿನಯದ ಇಷ್ಕಿಯಾ ಚಿತ್ರದ ಹಾಡೊಂದು ಭಟ್ಟರಿಗೆ ತುಂಬಾನೆ ಇಷ್ಟವಾಗಿದೆ.ಅದಕ್ಕೇನೆ ಅಂತಹ ಅದ್ಭುತ ಸಾಹಿತ್ಯದ ಗೀತೆಯನ್ನ ಭಟ್ಟರು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.ಅಷ್ಟೇಅಲ್ಲ, ಪಂಚರಂಗಿ ಚಿತ್ರದ ಹಾಡಿನ ಕೆಲಸದ ಸಮಯದಲ್ಲಿ ಅದನ್ನ ಗಾಯಕ ಚೇತನ್ ಬಳಿ ಹಾಡಿಸಿದ್ದಾರೆ...

ಇಷ್ಟಕ್ಕೆ ಮುಗಿದಿದ್ದರೆ ಭಟ್ಟರ ಹಾಡಿನ ಪ್ರೀತಿ ಗೊತ್ತಾಗಿರುತ್ತಿತ್ತೋ ಇಲ್ವೊ. ಇಷ್ಕಿಯಾ ಚಿತ್ರದ ಹಿಂದಿ ಹಾಡಿಗೆ ಕನ್ನಡದ ಸಾಹಿತ್ಯವನ್ನು ಮ್ಯಾಚ್ ಕೂಡ ಮಾಡಲಾಗಿದೆ. ಹಾಗೆ ಸಿದ್ಧವಾದ ಹಿಂದಿ ದೃಶ್ಯದ ಕನ್ನಡದ ಹಾಡು ಸದ್ಯ ಫೇಮಸ್. ಫೇಮಸ್ ಅಂದರೆ, ಭಟ್ಟರು ಇದನ್ನ ತಮ್ಮ ಪಂಚರಂಗಿಗಾಗಿ ಬಳಸುತ್ತಿಲ್ಲ. ಬದಲಿಗೆ ಯುಟ್ಯೂಬ್ ನಂತಹ ಸೈಟ್ ನಲ್ಲಿ ಇದು ಎಲ್ಲರ ಗಮನ ಸೆಳೆಯುತ್ತಿದೆ. ಕನ್ನಡದ ಹಾಡಿನಷ್ಟೆ ಮಾಧುರ್ಯತೆ ಆ ಹಾಡಿಗೆ ಬಂದು ಬಿಟ್ಟಿದೆ.ಹಾಗೆ ಭಟ್ರು ಬರೆದ ಹಾಡಿನ ಸಾಲು ಒಮ್ಮೆ..ಇನ್ನೊಮ್ಮೆ ಅಂತಲೆ ಗುಂಗು ಹಿಡಿಸುತ್ತವೆ...ನನ್ನ ಬೆನ್ನಲ್ಲಿಯ ಕಣ್ಣೆಲ್ಲ ನಿನ್ನ ಕಡೆ...ಅಂತಲೇ ಕನ್ನಡಿಗರ ಗಮನ ಸೆಳೆಯುತ್ತಿದೆ ಈ ಹಾಡು..

ಆದ್ರೆ, ಗುಲ್ಜಾರ್ ಅವರ ಗೀತೆಗೂ..ಭಟ್ರ ಕನ್ನಡ ಗೀತೆಗೆ ಹೋಲಿಕೆ ಇದ್ದೇ ಇದೆ. `ದಿಲ್ ತೋ ಬಚ್ಚಾ ಹೈಜೀ' ಅಂತ ಗುಲ್ಜಾರ್ ಬರೆದುಕೊಡ್ತಾರೆ. ಭಟ್ರು ಅದನ್ನ `ಹೃದಯ ಸಣ್ಣ ಮಗು' ಅಂತ ಹೇಳ್ತಾರೆ.ಇವೆರಡರಲ್ಲೂ ಸರಿಯಾದ ಸೆಳೆತವಿದೆ.ಹಾಗಂತ ಇಡೀ ಹಾಡಿಗೆ ಹಾಡೇ ಇಲ್ಲಿ ಕನ್ನಡಕ್ಕೆ ಬಂದಿಲ್ಲ. ಹಿಂದಿಯ ಭಾವ ಬಿಡದೇನೆ ಕನ್ನಡದ ಪದ್ಯದಂತೆ ಯೋಗರಾಜ್ ತಮ್ಮ ಹಿಂದಿಯ ಹಾಡಿನ ಪ್ರೀತಿಯನ್ನ ಇಲ್ಲಿ ತೋರಿದ್ದಾರೆ ಅಂತ ಹೇಳಬಹುದು.

ಯೋಗರಾಜ್ ಭಟ್ಟರ ಈ ಹಿಂದಿ ಗೀತೆಯ ಕನ್ನಡ ಹಾಡನ್ನ ಒಮ್ಮೆ ಕೇಳಲೇಬೇಕು.ಕಾರಣ ಹಾಡಿನ ಸಂಗೀತಕ್ಕೆ...ಬಳಸಿದ ಪದಗಳಿಗೆ...ಚೇತನ್ ಹಾಡಿನ ಭಾವಕ್ಕೆ ಸರಿಯಾಗಿಯೆ ಹೊಂದಾಣಿಕೆಯಾಗಿದೆ. ಅದ್ದರಿಂದಲೋ ಏನೋ.ಯೂಟ್ಯೂಬ್ ನಲ್ಲಿ ಇದನ್ನ ಕೇಳುವ ಮಂದಿ ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ದಿಲ್ ತೋ ಬಚ್ಚಾ ಹೈ ಜೀ ಕನ್ನಡ ಸಾಂಗ್ ಅಂತ ಇಂಗ್ಲಿಷ್ ನಲ್ಲಿ ಟೈಪ್ ಮಾಡಿದರೇ ಸಾಕು. ಕನ್ನಡದ ಇಷ್ಕಿಯಾ ಹಾಡು ಹಾಜರ್. ಕೇಳಿ ನೀವೂ ಎಂಜಾಯ್ ಮಾಡಿ. ನಾನಂತು ಸರಿ ಸುಮಾರು ಹಲವು ಬಾರಿ ಕೇಳಿದ್ದೇನೆ. ಅದರ ಗುಂಗು ಇನ್ನು ಹೋಗ್ತಾಯಿಲ್ಲ. ಅದಕ್ಕೇನೆ ಇಲ್ಲಿ ಆ ಎಲ್ಲ ಸೆಳೆತವನ್ನ ಬರೆದು ಹೊರ ಬರಲು ಪ್ರಯತ್ನಿಸುತ್ತಿದೇನೆ....

-ರೇವನ್ ಪಿ.ಜೇವೂರ್

Sunday, June 13, 2010

ಮನದ ಮಾತು ಮದುರ

ಮನದಲ್ಲಿ ಏನೆಲ್ಲ ಅರಳುತ್ತವೆ. ಆದ್ರೆ, ಎಲ್ಲವೂ ಹೇಳುವಂತವಲ್ಲ. ಕೆಲವು ಹೇಳಿ ಹಗುರವಾಗಬಹುದು. ಇನ್ನು ಕೆಲವು ಮನದಲ್ಲಿಯೇ ಚಿತ್ತಾರ ಬಿಡಿಸಿಬಿಡುತ್ತವೆ. ಮತ್ತು ಕೆಲವು ಮನದನಿಯಾಗಿ ಸಾಲುಗಳಾಗ್ತವೆ. ಕವಿತೆಗಳಾಗತ್ತವೆ. ಹಾಗಾಗಿ, ಮನದ ತಾಣ ಒಂದು ಸಮೃದ್ಧ ಅಕ್ಷಯ ಪಾತ್ರವೇ ಬಿಡಿ. ಅಲ್ಲದೇ ಯಾರಬೇಕಾದ್ರು. ಏನನ್ನಾದ್ರು ಇಲ್ಲಿ ಕಲ್ಪಿಸಿಕೊಳ್ಳಬಹುದು. ಇನ್ನೆಲ್ಲ ಕನಸು ಕಾಣಬಹುದು. ಆದ್ರೂ, ಇಲ್ಲೂಳಿಯುವ ಭಾವಗಳು ಆಗಾಗ ಕಾಡುತ್ತವೆ. ಹಳೇ ಗೀತೆಗಳಾಗಿ ನಮ್ಮನ್ನು ಚೇಡಿಸುತ್ತವೆ. ನನ್ನ ಮನದಲ್ಲಿ ಅಂತ ಹಲವು ಹಾಡುಗಳಿವೆ. ಆಮೀರ್ ಖಾನ್ ಅಭಿನಯದ `ಫನ್ಹಾ' ಚಿತ್ರದ ಒಂದು ಗೀತೆ ನನ್ನ ಮನದಾಳದಲ್ಲಿ ಇನ್ನು ಜೀವಂತ.

ಆಗಷ್ಟೇ ಬೆಂಗಳೂರಿಗೆ ಬಂದ ದಿನಗಳವು. ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡ್ತಿದ್ದ ದಿನವದು. ತಿಂಡ್ಲು ಅನ್ನುವ ಹಳ್ಳಿಯಲ್ಲಿ ಚಿಕ್ಕದೊಂದು ರೂಮ್ ಮಾಡಿದ್ದೇ. ಒಬ್ಬನೇ ಇದ್ದರೂ ಹಾಡುಗಳು ಸಾಥ್ ನೀಡ್ತಿದ್ದವು. ಎಫ್ಎಂನಲ್ಲಿ ದಿನವೂ ಕೇಳ್ತಿದ್ದ ಗೀತಗಾನದ ಸಂಭ್ರಮದ ದಿನ ನನ್ನದಾಗ. ಒಂದಿಲ್ಲ ಒಂದು ಹಾಡು ನನ್ನೆದೆ ದಿನವೂ ತಾಕುತ್ತಿದ್ದವು. ಹಾಗೆ ಎದೆಯಲ್ಲಿ ಆಳವಾಗಿ ಉಳಿದ ಸಾಲುಗಳಲ್ಲಿ ಪ್ರಸುನ್ ಜೋಶಿ ಬರೆದ ತೇರೆ ದಿಲ್ಮೇ ಪನಾ ಮಿಲ್ ಜಾಯ್. ತೇರೆ ಇಷ್ಕ್ ಮೇ ಮೇರಿ ಜಾನ್ ಫನಾ ಹೊಜಾಯ್ .. ಅನ್ನುವ ಈ ಎರಡು ವಾಕ್ಯದ ಚಿಕ್ಕ ಪದ್ಯ ಇನ್ನು ಕಾಡುತ್ತದೆ. ಇದರ ಕಾಡುವಿಕೆ ಅದೆಷ್ಟು ಇತ್ತು ಅಂದ್ರೆ, ಇದನ್ನ ಕನ್ನಡಕ್ಕೆ ಬರೆದುಕೊಂಡದ್ದಿದೆ. ಈಗಲೂ ನಾ ಬರೆದ ಸಾಲುಗಳನ್ನ ಹೀಗೆ ನೆನಪಿಸಿಕೊಳ್ಳುತ್ತೇನೆ...

ನಿನ್ನೆದೆಯ ಗೂಡಲಿ ಎನ್ನ ಪ್ರೀತಿಗೆ ಜಾಗವಿರಲಿ.
ನಿನ್ನ ಪ್ರೀತಿಗಾಗಿ ಎನ್ನ ಪ್ರಾಣ ಪಕ್ಷಿ ಹಾರಿಹೋಗಲಿ....

ಈ ಸಾಲಿನ ಪ್ರತಿ ಭಾವ ಎನ್ನೆದಯಲ್ಲಿ ಅಚ್ಚಳಿಯದೆ ಉಳಿದ ಭಾವ...ಮನದ ಮುಲೆಯಲ್ಲಿ ಇದು ಆಗಾಗ ತಾಜಾ ಆಗುತ್ತಲೆ ಇರುತ್ತದೆ. ಇದು ನನ್ನೇಕೆ ಕಾಡುತ್ತದೆ. ಇನ್ನು ಏನೆಲ್ಲ ಹೇಳಿಬಿಡು ಅಂತ ಬೇಡುತ್ತದೆ. ಆದರೂ..ಇನ್ನು ಏನೋ ಹೇಳುವುದಿದೆ. ಇನ್ನೊಮ್ಮೆ ಹೇಳ್ತಿನಿ. ಸದ್ಯಕ್ಕೆ ಇಷ್ಟು ಸಾಕು...

ರೇವನ್ ಪಿ.ಜೇವೂರ್