Sunday, June 13, 2010

ಮನದ ಮಾತು ಮದುರ

ಮನದಲ್ಲಿ ಏನೆಲ್ಲ ಅರಳುತ್ತವೆ. ಆದ್ರೆ, ಎಲ್ಲವೂ ಹೇಳುವಂತವಲ್ಲ. ಕೆಲವು ಹೇಳಿ ಹಗುರವಾಗಬಹುದು. ಇನ್ನು ಕೆಲವು ಮನದಲ್ಲಿಯೇ ಚಿತ್ತಾರ ಬಿಡಿಸಿಬಿಡುತ್ತವೆ. ಮತ್ತು ಕೆಲವು ಮನದನಿಯಾಗಿ ಸಾಲುಗಳಾಗ್ತವೆ. ಕವಿತೆಗಳಾಗತ್ತವೆ. ಹಾಗಾಗಿ, ಮನದ ತಾಣ ಒಂದು ಸಮೃದ್ಧ ಅಕ್ಷಯ ಪಾತ್ರವೇ ಬಿಡಿ. ಅಲ್ಲದೇ ಯಾರಬೇಕಾದ್ರು. ಏನನ್ನಾದ್ರು ಇಲ್ಲಿ ಕಲ್ಪಿಸಿಕೊಳ್ಳಬಹುದು. ಇನ್ನೆಲ್ಲ ಕನಸು ಕಾಣಬಹುದು. ಆದ್ರೂ, ಇಲ್ಲೂಳಿಯುವ ಭಾವಗಳು ಆಗಾಗ ಕಾಡುತ್ತವೆ. ಹಳೇ ಗೀತೆಗಳಾಗಿ ನಮ್ಮನ್ನು ಚೇಡಿಸುತ್ತವೆ. ನನ್ನ ಮನದಲ್ಲಿ ಅಂತ ಹಲವು ಹಾಡುಗಳಿವೆ. ಆಮೀರ್ ಖಾನ್ ಅಭಿನಯದ `ಫನ್ಹಾ' ಚಿತ್ರದ ಒಂದು ಗೀತೆ ನನ್ನ ಮನದಾಳದಲ್ಲಿ ಇನ್ನು ಜೀವಂತ.

ಆಗಷ್ಟೇ ಬೆಂಗಳೂರಿಗೆ ಬಂದ ದಿನಗಳವು. ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡ್ತಿದ್ದ ದಿನವದು. ತಿಂಡ್ಲು ಅನ್ನುವ ಹಳ್ಳಿಯಲ್ಲಿ ಚಿಕ್ಕದೊಂದು ರೂಮ್ ಮಾಡಿದ್ದೇ. ಒಬ್ಬನೇ ಇದ್ದರೂ ಹಾಡುಗಳು ಸಾಥ್ ನೀಡ್ತಿದ್ದವು. ಎಫ್ಎಂನಲ್ಲಿ ದಿನವೂ ಕೇಳ್ತಿದ್ದ ಗೀತಗಾನದ ಸಂಭ್ರಮದ ದಿನ ನನ್ನದಾಗ. ಒಂದಿಲ್ಲ ಒಂದು ಹಾಡು ನನ್ನೆದೆ ದಿನವೂ ತಾಕುತ್ತಿದ್ದವು. ಹಾಗೆ ಎದೆಯಲ್ಲಿ ಆಳವಾಗಿ ಉಳಿದ ಸಾಲುಗಳಲ್ಲಿ ಪ್ರಸುನ್ ಜೋಶಿ ಬರೆದ ತೇರೆ ದಿಲ್ಮೇ ಪನಾ ಮಿಲ್ ಜಾಯ್. ತೇರೆ ಇಷ್ಕ್ ಮೇ ಮೇರಿ ಜಾನ್ ಫನಾ ಹೊಜಾಯ್ .. ಅನ್ನುವ ಈ ಎರಡು ವಾಕ್ಯದ ಚಿಕ್ಕ ಪದ್ಯ ಇನ್ನು ಕಾಡುತ್ತದೆ. ಇದರ ಕಾಡುವಿಕೆ ಅದೆಷ್ಟು ಇತ್ತು ಅಂದ್ರೆ, ಇದನ್ನ ಕನ್ನಡಕ್ಕೆ ಬರೆದುಕೊಂಡದ್ದಿದೆ. ಈಗಲೂ ನಾ ಬರೆದ ಸಾಲುಗಳನ್ನ ಹೀಗೆ ನೆನಪಿಸಿಕೊಳ್ಳುತ್ತೇನೆ...

ನಿನ್ನೆದೆಯ ಗೂಡಲಿ ಎನ್ನ ಪ್ರೀತಿಗೆ ಜಾಗವಿರಲಿ.
ನಿನ್ನ ಪ್ರೀತಿಗಾಗಿ ಎನ್ನ ಪ್ರಾಣ ಪಕ್ಷಿ ಹಾರಿಹೋಗಲಿ....

ಈ ಸಾಲಿನ ಪ್ರತಿ ಭಾವ ಎನ್ನೆದಯಲ್ಲಿ ಅಚ್ಚಳಿಯದೆ ಉಳಿದ ಭಾವ...ಮನದ ಮುಲೆಯಲ್ಲಿ ಇದು ಆಗಾಗ ತಾಜಾ ಆಗುತ್ತಲೆ ಇರುತ್ತದೆ. ಇದು ನನ್ನೇಕೆ ಕಾಡುತ್ತದೆ. ಇನ್ನು ಏನೆಲ್ಲ ಹೇಳಿಬಿಡು ಅಂತ ಬೇಡುತ್ತದೆ. ಆದರೂ..ಇನ್ನು ಏನೋ ಹೇಳುವುದಿದೆ. ಇನ್ನೊಮ್ಮೆ ಹೇಳ್ತಿನಿ. ಸದ್ಯಕ್ಕೆ ಇಷ್ಟು ಸಾಕು...

ರೇವನ್ ಪಿ.ಜೇವೂರ್

No comments:

Post a Comment