ಗಣೇಶ ನೀ ನೆನಗೆ ಹೆಚ್ಚು.ಬರೊಬ್ಬರಿ ೭ ವರ್ಷ ನಿನ್ನನಿಟ್ಟು ಪೂಜಿಸಿದೆ.
ಗೆಳೆಯರೊಟ್ಟಿಗೆ ಸಾರ್ವಜನಿಕವಾಗಿ ಪೂಜಿಸಿದೇವು.
ಅದರ ಫಲ ನಾನು ಈಗ ಒಂದು ಮಟ್ಟಕ್ಕೆ ಬಂದು
ನಿಂತಿದ್ದೇನೆ.
ನಿನ್ನ ಪೂಜಿಸುವಾಗ ಒಂದು ನಂಬಿಕೆಯಿತ್ತು.
ಜೀವನದಲ್ಲಿ ಏನೋ ಆಗುತ್ತೆ ಭಾರಿ ಬದಲಾವನೆಯಂದು.
ಅದು ಈಗ ಆಗ್ತಾಯಿದೆ. ಅಂದುಕೊಂಡ ಹುಡುಗಿ
ಜೀವನಕ್ಕೆ ಕಾಲಿಟ್ಟಾಗಿದೆ. ಪ್ರೀತಿಯಿಂದ ಮಾಡುವ
ಕೆಲಸವೂ ಸಿಕ್ಕಿದೆ.
ಸಾಕಪ್ಪ ಇಷ್ಟು ಅನ್ನುವ ಸಂಬಳವೂ ಇದೆ.
ತಿನ್ನಲು ಕೊರತೆಯಿಲ್ಲ. ಕೊರಗಲು ಮನೆಯಲ್ಲಿ
ಜಾಗವೇಯಿಲ್ಲ. ಪ್ರೀತಿ ತುಂಬಿದೆ. ಸ್ನೇಹ ಹೆಚ್ಚುತ್ತಿದೆ.
ನಿನ್ನ ನೆನಪೂ ಆಗುತ್ತಿದೆ.
ಗಣೇಶ ನೀ ನನಗೆ ಅಪಾರ..ಹೀಗೆ ಇರು ನನ್ನೊಟ್ಟಿಗೆ
ನಿನ್ನ ಪೂಜಿಸುವ ಮನದಲ್ಲಿ. ನನ್ನ ಬಾಲ ಗಣೇಶ...
-ರೇವನ್
No comments:
Post a Comment