Sunday, November 20, 2011

ಕನ್ನಡದಲ್ಲಿ ಚಾರ್ಮಿ ಮೋಹಕತೆ...

ಚಾರ್ಮಿ ಕೌರ್..ಮತ್ತೆ ಕನ್ನಡೆ ಬಂದಿದ್ದಾರೆ. ಆಗ ಓಂ ಸಾಯಿ ಪ್ರಕಾಶ್ ಈ ಪಂಜಾಬ್ ಬೆಡಗಿಯನ್ನ ಕನ್ನಡಕ್ಕೆ ತಂದಿದ್ರು. ೨೦೦೭ ರಲ್ಲಿ ತೆರೆ ಕಂಡ `ಲವ ಕುಶ' ಚಿತ್ರದಲ್ಲಿ ಚಾರ್ಮಿ ಕೌರ್ ಮುದ್ದು..ಮುದ್ದಾಗಿ ಕಂಡು ಕನ್ನಡಿಗರ ಕಣ್ಣುಗಳನ್ನ ಸೆಳೆದಿದ್ದರು. ಬಳಿಕ ಕೌರ್ ಎಂಬ ಈ ಗುಂಡು..ಗುಂಡಾದ ಹುಡುಗಿ ಕನ್ನಡಕ್ಕೆ ಬರಲೇ ಇಲ್ಲ...ಆದರೆ ದೇವ್ ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಚಾರ್ಮಿ ಕಾಣಿಸಿಕೋಳ್ಳುತ್ತಿದ್ದಾರೆ....




ಹೌದು...! ಚಾರ್ಮಿಯನ್ನ ಕನ್ನಡಕ್ಕೆ ತರೊ ಕೆಲಸವನ್ನ ನಿರ್ದೇಶಕ ಇಂದ್ರಜೀತ್ ಮಾಡಿದ್ದಾರೆ. ಹಿಂದೆಂದೂ ನಿರ್ವಹಿಸದೇ ಇರೋ ಪಾತ್ರವನ್ನೇ ಇಲ್ಲಿ ಕೊಟ್ಟಿದ್ದಾರೆ. ಆ ಬಗ್ಗೆ ಮಾತನಾಡೋ ಚಾರ್ಮಿ ಮೊನ್ನೆ ಚಿತ್ರೀಕರಣದ ಜಾಗದಲ್ಲಿ ಸಿಕ್ಕಿದ್ರು. ಬೆಂಗಳೂರಿನಲ್ಲಿರೊ ಕರಿಷ್ಮಾ ಹಿಲ್ಸ್ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಡುವಿನ ವೇಳೆ ಚಾರ್ಮಿ ಮಾತು ಶುರುವಾದವು....


ಚಾರ್ಮಿಗೆ
ಇಲ್ಲಿ ಹೊಸ ಥರದ ಪಾತ್ರವೇ ಸಿಕ್ಕಿದೆ. ನಾವು-ನೀವೂ ನೋಡಿರೋ ಹಾಗೆ ಚಾರ್ಮಿಯಿಲ್ಲಿ ನೃತ್ಯನಿರ್ದೇಶಕಿ. ಅದು ಚಲನಚಿತ್ರದ ನೃತ್ಯ ನಿರ್ದೇಶಕಿ. ತಾರೆಯರಿಗೇನೆ ನೃತ್ಯ ಹೇಳಿಕೊಡುವ ತಾರೆ...ಒಂಚೂರು ಜೋರು..ಇನ್ನೊಂಚೂರು ಗಟ್ಟಿಗಿತ್ತಿ....ಎಲ್ಲವನ್ನೂ ತೋರಬೇಕು. ಅಂತಹ ಪಾತ್ರವೇ ಸಿಕ್ಕಿರೊದ್ರಿಂದ ಈಗ ಖುಷಿ..ಖುಷಿಯಾಗಿ ಕೆಲಸ ಮಾಡ್ತಿದ್ದಾರೆ...

ಆದ್ರೂ, ಇಲ್ಲಿ ಬರಲಿಕ್ಕೆ ಒಂದು ಕಾರಣವೂ ಇದೆ. ಅದುವೇ ಸೌಂದರ್ಯ. ನಿರ್ದೇಶಕ ಇಂದ್ರಜೀತ್ ತಮ್ಮನ್ನ ತೆರೆ ಮೇಲೆ ಇನ್ನೂ ಚೆನ್ನಾಗಿ ತೋರುವ ಭರವಸೆ ಕೊಟ್ಟಿದ್ದಾರೆ. ಅದೇ ಒಂದು ದಟ್ಟ ಉತ್ಸಾಹದಲ್ಲಿಯೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ....

ದೇವ್ ಸನ್ ಆಫ್ ಮುದ್ದೇಗೌಡ ಅಂತೀರಾ...ನಾಯಕ-ನಾಯಕಿ ಎರಡೂ ಚಾರ್ಮಿನಾ ಅನ್ನೋ ಅನುಮಾನ ನಿಮ್ಮಲ್ಲಿ ಈಗಲೇ ಬಂದಿರಬೇಕು. ಆದರೆ, ಅದಲ್ಲ ಬಿಡಿ. ಚಾರ್ಮಿಗೆ ಇಲ್ಲೊಬ್ಬ ನಾಯಕ ಇದ್ದಾನೆ. ಅದುವೇ ಕುಳಿಕೆನ್ನೆ ಹುಡುಗ ದಿಗಂತ್. ಹಿಂದಿನ ಚಿತ್ರಕ್ಕಿಂತಲೂ ಇಲ್ಲಿ ಮೋಹ...ಮನಮೋಹಕವಾಗಿದ್ದಾರೆ...ತೆಲೆಗೂದಲ ಬಣ್ಣವನ್ನ ಬದಲಿಸಿಕೊಂಡು ಕೊಂಚ ಜಾಸ್ತಿನೇ ಆರ್ಕಷಕವಾಗಿದ್ದಾರೆ.ಚಿತ್ರವೂ ಅದನ್ನೇ ಬಯಸೋದ್ರಿಂದ ದಿಗಂತ್ ಹೆಚ್ಚೇ ಗ್ಲಾಮರಸ್ ಆಗಿದ್ದಾರೆ...

ಇಂದ್ರಜೀತ್ ಲಂಕೇಶ್ ರುಚಿನೂ ಹಾಗೇ ಇದೇ ಅಲ್ಲವೇ. ಆ ಆಸೆಗಳಿಗೆ ಒಂದು ಕಡೆ ಚಾರ್ಮಿ. ಇನ್ನೊಂದು ಕಡೆ ದಿಗಂತ್ ಇದ್ದಾರೆ. ಇನ್ನು ಅನೇಕ ಕಲಾವಿದರೂ ಚಿತ್ರದಲ್ಲಿದ್ದಾರೆ. ಆದರೆ, ಸದ್ಯಕ್ಕೆ ಚಾರ್ಮಿ ಮತ್ತು ದಿಗಂತ್ ಅಭಿನಯದ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇಂದ್ರಜೀತ್ ಹೇಳೊವಂತೆ ಚಿತ್ರ ತೆರೆಗೆ ಬಂದ ಮೇಲೆ ಭಾರೀ ಸುದ್ದಿಯನ್ನೂ ಮಾಡಲಿದೆ. ವಿವಾದಕ್ಕೂ ಸಿಲುಕುವ ಸಾಧ್ಯತೆನೂ ಇದೆ. ಆದ್ರೆ, ಅದ್ಯಾವ ವಿಷ್ಯವನ್ನ ತೆಗೆದುಕೊಂಡು ಇಂದ್ರಜೀತ್ ಸಿನಿಮಾ ಮಾಡ್ತಿದ್ದಾರೆಂಬ ರಹಸ್ಯವನ್ನಂತೂ ಬಿಟ್ಟುಕೊಟ್ಟಿಲ್ಲ..


-ರೇವನ್ ಪಿ.ಜೇವೂರ್

Friday, November 18, 2011

ವಿಜೈಹೋ ಪ್ರಕಾಶ್...

ಮನೆಯೇ ಮೊದಲ ಸಂಗೀತ ಶಾಲೆ...
ಎಲ್ಲಿ ನೋಡಿದ್ರೂ ಸಂಗೀತದ ನಾದದ್ದೇ ಅಲೆ. ಅಮ್ಮ ಹಾಡುಗಾರ್ತಿ. ಅಪ್ಪ ದೊಡ್ಡ ಗಾಯಕ. ಅಜ್ಜ ಏನೂ ಕಮ್ಮಿಯಿರಲಿಲ್ಲ. ಶಾಸ್ತ್ರೋಕ್ತವಾಗಿ ಅಜ್ಜನೂ ಶಾಸ್ತ್ರೀಯ ಸಂಗೀತ ಕಲೆತಿದ್ರು. ಅಷ್ಟೆ. ಇನ್ನೇನು ಬೇಕು. ಮನೆಯಲ್ಲಿ ಸಂಗೀತದ್ದೇ ವಾತಾವರಣ.. ಬಾಲ್ಯದಲ್ಲಿಯೇ ಸಂಗೀತ ಸ್ವರಗಳ ಅಭ್ಯಾಸ ಶುರುವಾಗಿತ್ತು. ಹಾಗೆ ಸಂಗೀತ ಅಭ್ಯಾಸ ಮಾಡಿದವ್ರು ಅದು ಬೇರೆ ಯಾರು ಅಲ್ಲ..
ಜೈ ಹೋ ಖ್ಯಾತಿಯ ಗಾಯಕ ವಿಜಯ್ ಪ್ರಕಾಶ್.. ಮೊನ್ನೆ ಬೆಂಗಳೂರಿಗೆ ಬಂದಿದ್ರು. ಆಗಲೇ ತಮ್ಮ ಬದುಕಿನ ಸಂಗೀತ ಪಯಣ ಪುಟಗಳನ್ನ ತಿರುವಿ ಹಾಕಿದ್ರು..

ವಿಜಯ್ ಪ್ರಕಾಶ್ ತಕ್ಷಣಕ್ಕೆ ಕನ್ನಡಿಗರು ಅನಿಸೋದಿಲ್ಲ. ಉತ್ತರ ಭಾರತದ ಅದ್ಯಾವುದೋ ಊರಿನವರು ಅನಿಸುತ್ತಾರೆ. ಒಂದೊಮ್ಮೆ ಗಾಯಕ ಶ್ಯಾನ್ ತರವೂ ಕಾಣಿಸುತ್ತಾರೆ. ಆದ್ರೆ, ವಿಜಯ್ ಪ್ರಕಾಶ್ ಅಪ್ಪಟ ಕನ್ನಡಿಗರು. ಮೈಸೂರಲ್ಲಿ ಹುಟ್ಟಿ ಬೆಳೆದವರು. ತಿಳುವಳಿಕ ಬರೋವರೆಗೂ ಮೈಸೂರಲ್ಲಿಯೇ ಉಳಿದವರು. ೨೦ ನೇ ವಯಸ್ಸಿಗೆ ಸಂಗೀತದಲ್ಲಿಯೇ ಸಾಧಿಸಬೇಕು...ಸಂಗೀತದಲ್ಲಿಯೇ ಬೆಳೆಯ ಬೇಕೆಂದು ಮುಂಬೈ ಕಡೆಗೆ ಮುಖ ಮಾಡಿದ್ರು. ಅಲ್ಲಿಯೇ ಏಕೆ ಹೋದ್ರೋ ಏನೋ..

ಮುಂಬೈನಗರಿ ಯುವ ವಿಜಯ್ ರನ್ನ ಸ್ವಾಗತಿಸಿತು. ಅದು ಸಾ.ರೆ.ಗಾ.ಮ.ಪ ಸಂಗೀತ ವೇದಿಕೆ ಮೂಲಕ. ಖಾಸಗಿ ವಾಹಿನಿ ಸೋನಿಯಲ್ಲಿ ಯುವ ಪ್ರತಿಭೆಗಳನ್ನ ಹುಡುಕೋ ಈ ಕಾರ್ಯಕ್ರಮದಲ್ಲಿ ವಿಜಯ್ ಗೆ ಹಾಡೋ ಅವಕಾಶ್ ಸಿಕ್ಕಿತು. ಹಿಂದಿ ಬಾರದೆ ಇದ್ದರೂ ಅದನ್ನ ಕಲಿತು ಹಿಂದಿ ಹಾಡುಗಳನ್ನೇ ಹಾಡಿದ್ರು. ಕನ್ನಡದ ಒಂದು ಗೀತೆಯನ್ನ ಮುಂಬೈಯಲ್ಲಿ ಹಾಡಿದ್ರು. ಆಗಲೇ..ವಿಜಯ್ ಒಂಚೂರು ಗುರುತಿಸಿಕೊಂಡ್ರು...

ಬಳಿಕ ಸಾಗಿದ ಪಯಣ ದೊಡ್ಡದು. ಸಂಗೀತದಲ್ಲಿಯೇ ಹೆಸರು ಮಾಡಬೇಕಂದು ಬಂದ ವಿಜಯ್ ಪ್ರಕಾಶ್ ಗೆ ಜಾಹೀರಾತು ಕ್ಷೇತ್ರ ಕೈ ಬೀಸಿ ಕರೆಯಿತು. ಯಾಕೆಂದ್ರೆ, ವಿಜಯ್ ಕಂಠ ಸಿರಿ ಅಷ್ಟು ಅದ್ಭುತವಾಗಿದೆ. ಗಡಸು ಧ್ವನಿಯ ವಿಜಯ್ ಮಾತನಾಡಲು ಶುರು ಮ ಮಾಡಿದ್ರೆ ಸಾಕು. ಡಿಜಿಟಲ್ ಸೌಂಡ್ ನ ಅನುಭವವಾಗುತ್ತದೆ. ಅಂತಹ ಗಟ್ಟಿ ಧ್ವನಿಯ ವಿಜಯ್ ಪ್ರಕಾಶ್ ಸುಮಾರು ೮ ಸಾವಿಕ್ಕೂ ಹೆಚ್ಚು ಜಾಹೀರಾತುಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇದರ ಜೊತೆಗೆ ಜಾಹೀರಾತು ಮಂದಿಗೆ ವಿಜಯ್ ಒಬ್ಬ ಗಾಯಕ ಎಂಬ ಸತ್ಯವೂ ಗೊತ್ತಾಯಿತು. ಆಗ ಜಿಂಗಲ್ಸ್ ಮಾಡಿಕೊಂಡೆಂಬ ಕೋರಿಕೆಗಳೂ ಬಂದವು. ಹಾಗೆ ಸಂಗೀತದ ಜೀವನ ಮುಂಬೈಯಲ್ಲಿ ಗಟ್ಟಿಯಾಗುತ್ತಲೇ ಹೋಯಿತು....

ಹಿಂದಿ ಚಿತ್ರ ಜಗತ್ತಿನ ಮಂದಿಗೂ ವಿಜಯ್ ಬಳಿಕ ಪರಿಚಯವಾದ್ರು. ಸುನೀಲ್ ಶೆಟ್ಟಿ ಅಭಿನಯದ `ಬಾಜ್' ಚಿತ್ರ ಒಂದು ಹಾಡಿಗೆ ಧ್ವನಿಯಾದ್ರು. ಅದುವೇ ವಿಜಯ್ ಹಿಂದಿ ಚಿತ್ರಕ್ಕೆ ಹಾಡಿದ ಮೊದಲ ಗೀತೆ. ಹೀಗೆ ಆರಂಭವಾದ ಹಿನ್ನೆಲೆ ಗಾಯನದ ಪಯಣ ಶುರುವಾಯಿತು. ತಮಿಳು ಚತ್ರಗಳಲ್ಲಿ ಹಾಡೊ ಅವಕಾಶವೂ ಆಗಲೇ ಬರುತ್ತಿದ್ದವು. ಹಿಂದಿ-ತಮಿಳು ಎರಡೂ ಭಾಷೆಯಲ್ಲಿ ಹಾಡುತ್ತಲೇ ಇದ್ರು. ಆಗಲೆ ರೆಹಮಾನ್ ಸಂಗೀತದ ಸ್ವದೇಶ್ ಚಿತ್ರಕ್ಕೆ ಒಂದು ಗೀತೆಗೆ ಧ್ವನಿಯಾಗೋ ಅವಕಾಶ ಬಂದಿತು. ಇಳೆಯರಾಜ್ ಸಂಗೀತ ನೀಡಿದ `ಚೀನಿ ಕಮ್ ಹೈ' ಚಿತ್ರದಲ್ಲೂ ಒಂದು ಹಾಡನ್ನ ಹಾಡಲು ಅವಕಾಶ ಬಂದಿತು...

ಉತ್ತರ-ದಕ್ಷಿಣ ಎರಡೂ ಕಡೆ ಪುಟ್ಟದಾಗಿ ಹೆಸರು ಮಾಡುತ್ತಲೇ ಇದ್ದ ವಿಜಯ್, ವಿಶ್ವವ್ಯಾಪಿ ಹೆಸರು ಮಾಡಿದ್ದು ಮಾತ್ರ ಜೈಹೋ ಹಾಡಿನಿಂದ. ಇಡೀ ಹಾಡಿಗೇನೂ ವಿಜಯ್ ಪ್ರಕಾಶ್ ಧ್ವನಿಯಿಲ್ಲ. ಕೇವಲ ಜೈಹೋ ಅಂದಿದ್ದಷ್ಟೆ. ಅದುವೇ ವಿಜಯ್ ಪ್ರಕಾಶ್ ರನ್ನ ವಿಜೈಹೋ ಪ್ರಕಾಶ್ ಎಂಬುಷ್ಟು ಖ್ಯಾತಿ ತಂದು ಕೊಡ್ತು...ಆದ್ರೆ, ಕನ್ನಡದ ಗಾಯಕ ಕನ್ನಡಕ್ಕೆ ಬರಲೇ ಇಲ್ಲವೇ ಅಂತ ಕೇಳಿಕೊಳ್ಳಬೇಕು ಅನಿಸುವ ಹೊತ್ತಿಗೆ `ಗಾಳಿಪಟ' ಚಿತ್ರದಲ್ಲಿ ಕವಿತೆ..ಕವಿತೆ ನೀನೇಕೆ ಪದಗಳಲ್ಲಿ ಕುಳಿತೆ ಎಂಬ ಹಾಡಿಗೆ ಅವಕಾಶ ಬಂತು. ಅದನ್ನ ಮನದುಂಬಿ ಹಾಡಿ...ಕನ್ನಡಿಗರ ಮನಕ್ಕೆ ಹತ್ತಿರವಾದ್ರು ವಿಜಯ್ ಪ್ರಕಾಶ್...ಅಲ್ಲಿಂದ ಕನ್ನಡದ ಗಾಯನದ ಪಯಣ ಶುರು...

ಇಲ್ಲಿವರೆಗೂ ಲೆಕ್ಕವಿಡಬಹುದಾದಷ್ಟು ಹಾಡುಗಳನ್ನ ಕನ್ನಡಕ್ಕೆ ಹಾಡಿದ್ದಾರೆ. ಸುದೀಪ್-ರಾಗಿಣಿ ಅಭಿನಯದ ಕೆಂಪೇಗೌಡ ಚಿತ್ರ ಥರ..ಥರ ಹಾಡಿಗೆ ವಿಜಯ್ ವಿಶೇಷ ಕಂಠದ ಸ್ಪರ್ಶವಿದೆ. ಇತ್ತೀಚಿಗೆ ತೆರೆ ಕಂಡಿದ್ದ ಜೋಗಯ್ಯ ಚಿತ್ರದ ಕುರಿ...ಕೋಳಿ ಹಾಡಿಗೂ ವಿಜಯ್ ಪ್ರಕಾಶ್ ಧ್ವನಿಯಿದೆ. ಕನ್ನಡದಲ್ಲೀ ಹಾಡಿರೊ ಇನ್ನು ಹಲವು ಚಿತ್ರಗಳು ತೆರೆ ಕಾಣಬೇಕಿದೆ. ಅದಕ್ಕೂ ಮೊದಲೇ ಸಂಗೀತ ನಿರ್ದೇಶನ ಮಾಡೊ ದೊಡ್ಡ ಜವಾಬ್ದಾರಿಯ ಅವಕಾಶ ಬಂದಿದೆ. ಅಂದರ್-ಬಾಹರ್ ಎಂಬ ಶೀರ್ಷಿಕೆಯ ಚಿತ್ರಕ್ಕೆ ವಿಜಯ್ ಪ್ರಕಾಶ್ ಸಂಗೀತ ನೀಡುತ್ತಿದ್ದಾರೆ. ಶಿವಣ್ಣ-ಪಾರ್ವತಿ ಮೆನನ್ ಅಭಿನಯದ ಈ ಚಿತ್ರದ ಚಿತ್ರೀಕರಣ ಬರೋ ವರ್ಷ ೧೫ ರಿಂದ ಶುರುವಾಗಲಿದೆ. ಹೊಸ ಹೆಜ್ಜೆ ಇಟ್ಟರೋ ವಿಜಯ್ ಪ್ರಕಾಶ್ ಅವರಿಗೆ ಜೈ ಹೋ...

ರೇವನ್ ಪಿ.ಜೇವೂರ್