ಕೃಷ್ಣನ್ ಲವ್ ಸ್ಟೋರಿ. ಕನ್ನಡದ ಸದ್ಯದ ಯಶಸ್ವಿ ಚಿತ್ರ. ತೆರೆಗೆ ಬಂದ ಮೊದಲ ದಿನ ಇದಕ್ಕೆ ಉತ್ತಮ ಆರಂಭ ಸಿಕ್ಕಿದೆ. ಹಾಗೇ ಈಗ ಅದು ಮುಂದುವರೆದಿದೆ. ಕನ್ನಡ ಪ್ರೇಕ್ಷಕ ಏನ್ ಹೇಳ್ತಾನೆ ಅಂತ ಚಿತ್ರ ತಂಡ ತಿಳಿದುಕೊಂಡೂ ಬಂದಿದೆ. ಅದೇ ಖುಷಿಯಲ್ಲಿಯೇ ತಂಡ ಒಂದು ಸತ್ಯವನ್ನೂ ಹೊರಗೆಡವಿದೆ. ಮೊದಲೇ ಹೇಳಿದಂತೆ ಮಾತು ಉಳಿಸಿಕೊಂಡಿದೆ..ಇದರ ಅರ್ಥ, ನೈಜ ಪ್ರೇಮ ಕಥೆಯ ನಾಯಕ ಯಾರು ಅನ್ನೋದು ಈಗ ಗೊತ್ತಾಗಿದೆ.ನಿರ್ದೇಶಕ ಶಶಾಂಕ ತಮ್ಮ ಚಿತ್ರದ ರಿಯಲ್ ಹೀರೋನನ್ನ ಮಾಧ್ಯಮಕ್ಕೆ ಪರಿಚಯಿಸಿದ್ದಾರೆ. ಈತ ಯಾರೂ ಅನ್ನುವ ಸಮ್ ಡಿಟೈಲ್ಸ್ ಕೂಡ ಕೊಟ್ಟಿದ್ದಾರೆ. ಕೇವಲ ಇದು ತಮ್ಮ ಸ್ನೇಹಿತನ ಜೀವನದಲ್ಲಿ ನಡೆದ ನೈಜ ಘಟನೆ. ಆತನೇ ಅಲ್ಲಿ ನಾಯಕ ಅಂತಲೇ ಚಿತ್ರದ ಆರಂಭದಿಂದಲೂ ಹೇಳ್ತಾ ಬಂದಿದ್ದರು. ಶೇಕಡ ೭೫ ರಷ್ಟು ನೈಜ ಘಟನೆ. ೨೫ ರಷ್ಟು ಸಿನೆಮಾ ಅಂತಲೇ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಜನ ಕೃಷ್ಣನನ್ನ ಲವ್ ಮಾಡಿದ್ದಾರೆ. ಉತ್ತಮ ಪ್ರತಿಕ್ರಿಯೇನು ನೀಡಿದ್ದಾರೆ. ನಿಜವಾದ ಕೃಷ್ಣ ಯಾರೂ...? ಏನ್ ಮಾಡ್ತಾಯಿದ್ದಾನೆ. ಇದಾನಾ ಇಲ್ವಾ..? ಯಾವಾಗ ಜನಕ್ಕೆ ತೋರಿಸ್ತೀರಾ...? ಅಂತ ಹಲವು ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ಎಲ್ಲ ಪ್ರಶ್ನೆಗೆ ಈಗ ತೆರೆ ಬಿದ್ದಿದೆ. ಉತ್ತರವೂ ಸಿಕ್ಕಿದೆ..
ಕೃಷ್ಣನ್ ಲವ್ ಸ್ಟೋರಿ ಬೇರೆ ಅದ್ಯಾರದೋ ಅಲ್ಲ. ಶಶಾಂಕನ ಶಿಷ್ಯನದ್ದು. ಹರ್ಷ ಅನ್ನೋ ಈತ ಈಗಾಗಲೇ ಚಿತ್ರರಂಗದಲ್ಲಿದ್ದಾನೆ. ಮೊಗ್ಗಿನ ಮನಸಲ್ಲಿ ರಾಧಿಕಾ ಪಂಡಿತ್ ಮೊಲದ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ. ಕೃಷ್ಣನ್ ಲವ್ ಸ್ಟೋರಿಯಲಿ ಖಳನಾಯಕ ಪಾತ್ರವನ್ನೂ ನಿರ್ವಹಿಸಿದ್ದಾನೆ. ಈ ರೀತಿ ಚಿತ್ರರಂಗದ ನಂಟು ಬೆಳೆಸಿಕೊಂಡು ಬರುತ್ತಿದ್ದಾನೆ. ಇದೇ ಚಿತ್ರ ಪ್ರೀತಿಯಿಂದಲೇ ಹರ್ಷ ಈಗಷ್ಟೇ ಸೆಟ್ಟೇರಿದ "೨೦೧೨ " ಚಿತ್ರದ ಐವರು ನಾಯಕರಲ್ಲಿ ಒಬ್ಬನಾಗಿ ಕಾಣಿಸಿಕೊಳ್ತಾಯಿದ್ದಾನೆ.
ರಿಯಲ್ ಲೈಫ್ ನ ಈ ಪ್ರೇಮಿಯ ಜೀವನದಲ್ಲಿ ಹ್ಯಾಪಿ ಎಂಡಿಂಗ್ ಇದೆ. ಆದ್ರೆ, ಶಶಾಂಕ್ ಚಿತ್ರವನ್ನ ದು:ಖದಲ್ಲಿ ಅಂತ್ಯ ಮಾಡಿದ್ದಾರೆ. ಹರ್ಷನ ಹುಡುಗಿ ಸದ್ಯ ಸು:ಖವಾಗಿದ್ದಾರೆ. ಅದ್ಯಾರನ್ನೋ ಮದುವೆಯಾಗಿ ಅದೆಲ್ಲೋ ಸೆಟ್ಲ್ ಆಗಿದ್ದಾರೆ. ಒಂದು ಮಗು ಕೂಡ ಇದೆ. ಚಿತ್ರದಲ್ಲಿ ನಡೆಯುವಂತೆ ಹರ್ಷನ ಪ್ರೀತಿಸಿದ ಹುಡುಗಿ ನಿಜ ಜೀವನದಲ್ಲಿ ಮತ್ತೊಬ್ಬನೊಟ್ಟಿಗೆ ಓಡಿ ಹೋಗ್ತಾಳೆ. ಹಾಗೆ ಓಡಿ ಹೋದಾಗ ಆ ಹುಡುಗ ಅಪಘಾತದಲ್ಲಿ ಸತ್ತು ಹೋಗುತ್ತಾನೆ. ಈ ಗದ್ದಲದಲ್ಲಿ ಹರ್ಷನ ಪ್ರೀತಿ ಗೌಣವಾಗುತ್ತದೆ. ಹುಡುಗಿ ಮನೆಯವರು ಬೇರೊಬ್ಬನೊಂದಿಗೆ ಮದುವೆ ಮಾಡಿದ್ದಾರೆ. ಅದೇ ಹುಡುಗನ ಜೊತೆಗೆ ಹರ್ಷನ ಹುಡುಗಿ ಸದ್ಯ ಸಂಸಾರ ಮಾಡುತ್ತಿದ್ದಾಳೆ..
ಶಶಾಂಕ್ ಇನ್ನೊಂದು ಸ್ಟೆಪ್ ಮುಂದೆ ಹೋಗುವ ಪ್ಲಾನ್ ನಲ್ಲಿದ್ದಾರೆ. ನಿಜ ಜೀನದಲ್ಲಿ ಹರ್ಷನ ಕಥೆ ಎಂಡ್ ಆಗಿದೆ. ಚಿತ್ರದಲ್ಲಿ ಕಥೆ ಇನ್ನು ಉಳಿದಿದೆ. ಜನ ಸಹ ನಾಯಕನಿಗೆ ನ್ಯಾಯಕೊಡಿಸಿ ಅಂತ ಬೇಡ್ತಾಯಿದ್ದಾರಂತೆ. ಅದಕ್ಕೇನೆ "ಕೃಷ್ಣನ್ ಲವ್ ಸ್ಟೋರಿ" ಭಾಗ-2 ಮಾಡುವ ಇರಾದೆ ಪ್ರಕಟಿಸಿದ್ದಾರೆ. ಬರುವ ಮೂರು ತಿಂಗಳಲ್ಲಿ ಸ್ಕ್ರಿಪ್ಟಿಂಗ್ ಮುಗಿಸಿದ ಬಳಿಕ ಕೃಷ್ಣನ್ ಲವ್ ಸ್ಟೋರಿಯ ಭಾಗ ಎರಡರ ಚಿತ್ರೀಕರಣ ಆರಂಭಿಸಲಿದ್ದಾರೆ. ಮೊದಲ ಚಿತ್ರದಲ್ಲಿದ್ದ ಅಜಯ್ ರಾವ್ ಮತ್ತೆ ಮುಂದುವರೆಯಲ್ಲಿದ್ದಾರೆ. ರಾಧಿಕಾ ಪಂಡಿತ್ ಮೊದಲ ಭಾಗದಲ್ಲಿ ಸತ್ತು ಹೋಗಿದ್ದಾಳೆ. ರಾಧಿಕಾ ಅಣ್ಣನ ಪಾತ್ರವೂ ಇಲ್ಲಿರುವುದಿಲ್ಲ. ಇನ್ನುಳಿದ ಪಾತ್ರಗಳು ಮುಂದುವರೆಯುತ್ತವಂತೆ.
ಆದ್ರೆ, ಪಾರ್ಟ್ -೨ ದಲ್ಲಿ ಇರುವ ಕಥೆಯಲ್ಲ ಕಲ್ಪನಾತೀತ. ಇಲ್ಲಿ ಸತ್ಯ ಘಟನೆಯ ಸ್ಪರ್ಶ ಇರೋದೇಯಿಲ್ಲ. ಏನೇ ಇದ್ದರೂ ಅದು ಶಶಾಂಕ್ ಕಲ್ಪನೆ...ಹೀಗಂತ್ ಖುದ್ ಶಶಾಂಕ್ ಹೇಳಿಕೊಂಡಿದ್ದಾರೆ. ಇವರ ಹೊಸ ಹೆಜ್ಜೆಗೆ ಒಂದು ಗುಡ್ ಲಕ್.ಆದ್ರೂ, ಏನ್ ಕತೆ ಮಾಡ್ತಾರೇ ಅನ್ನೋದು ಸದ್ಯ ಇನ್ನು ಉಳಿದಿರುವ ಪ್ರಶ್ನೆ...
- ರೇವನ್ ಪಿ.ಜೇವೂರ್
No comments:
Post a Comment